ನ್ಯೂಸ್ ನಾಟೌಟ್: ವಿದ್ಯೆಗಿಂತ ಮಿಗಿಲಾದದ್ದು ಬೇರೊಂದಿಲ್ಲ. ಶಿಕ್ಷಣ ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. ಪಿಯುಸಿ ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ನಿರ್ಣಾಯಕ ಹಂತವಾಗಿರುತ್ತದೆ. ಸರಿಯಾಗಿ ಯೋಚಿಸಿ ಮುಂದಿನ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು.
ಸುಳ್ಯದ ಎನ್ನೆಂಪಿಯುಸಿಯಲ್ಲಿ ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಚಿವ ಸಂಪುಟ ಉದ್ಘಾಟಿಸಿ, ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಮಾತನಾಡಿ, ವಿದ್ಯಾರ್ಥಿ ಸಮಿತಿಯಿಂದ ನಾಯಕತ್ವ ರೂಪಿಸಲು ಸಹಕಾರಿಯಾಗಿದೆ. ಅಲ್ಲದೇ ವಿದ್ಯಾರ್ಥಿಗಳು, ಪೋಷಕರು ಹಾಗೂ ಆಡಳಿತ ವ್ಯವಸ್ಥೆಯ ನಡುವೆ ಕೊಂಡಿಯಾಗಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಸಂಸ್ಥೆಯ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲ್, ಪದವಿ ವಿಭಾಗದ ಪ್ರಾಚಾರ್ಯ ಡಾ. ರುದ್ರ ಕುಮಾರ್ ಎಂ.ಎಂ, ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ. ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಗಾಯತ್ರಿ ಪಿ., ರಿಯಾ ಕೆಜೆ, ಮಣಿಕಂಠ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಅಂಕ ಗಳಿಸಿದ 47ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಆಜ್ಞ ಬಳಗದವರು ಪ್ರಾರ್ಥಿಸಿ, ಪ್ರಾಚಾರ್ಯರಾದ ಮಿಥಾಲಿ ಪಿ. ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ ವಿದ್ಯಾರ್ಥಿ ಸಂಘದ ನಾಯಕರು, ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಂಸ್ಥೆಯ ಪ್ರಾಂಶುಪಾಲರು ವಿದ್ಯಾರ್ಥಿ ಸಂಘದ ನಾಯಕರು, ಪ್ರತಿನಿಧಿಗಳಿಗೆ ಬ್ಯಾಡ್ಜ್ ಪ್ರದಾನ ಮಾಡಿದರು. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಮೋಘ ಸಂವಿಧಾನ ಪೀಠಿಕೆ ಓದಿದರು. ಸುಮಂತ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿಯರಾದ ಸಾವಿತ್ರಿ ಕೆ, ರೇಷ್ಮಾ ಎಂ, ಸುಚೇತಾ ಎಂ, ಉಮಾಶ್ರೀ ಪ್ರಭು ಡಿಸ್ಟಿಂಕ್ಷನ್ ಅಂಕ ಗಳಿಸಿದವರ ಪಟ್ಟಿ ವಾಚಿಸಿದರು. ಹಿರಿಯ ವಿದ್ಯಾರ್ಥಿಗಳಾದ ಕೆ. ಸಹನ ಭಟ್, ಅಂಬಿಕಾ ಅನಿಸಿಕೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳಾದ ಕೃತ ಸ್ವರ ದೀಪ್ತ ಕೆ, ಖುಷಿರ ನಿರೂಪಿಸಿ, ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಸಹಕರಿಸಿದರು. ವಿದ್ಯಾರ್ಥಿ ನಾಯಕಿ ಗಾಯತ್ರಿ ವಂದಿಸಿದರು. ಬಳಿಕ ಪ್ರಥಮ ಪಿಯು ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ರಿಯಾ ಕೆಜೆ ವಂದಿಸಿದರು.