ಬೆಳ್ಳಾರೆ: ಇಲ್ಲಿನ ಠಾಣೆ ವ್ಯಾಪ್ತಿಯ ಎಣ್ಮೂರು ಗ್ರಾಮದ ಯುವಕ ಶುಕ್ರವಾರ ನೇಣಿಗೆ ಶರಣಾದ ಬಗ್ಗೆ ವರದಿಯಾಗಿದೆ.
ಕಲ್ಲೇರಿ ಬಾಬುರವರ ಪುತ್ರ ಪವನ್ (೨೫ ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಹೇಳಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದು , ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ ಸುಶೀಲಾ, ಪತ್ನಿ ಮಮತಾ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ