ನ್ಯೂಸ್ ನಾಟೌಟ್: ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ (Ram Mandir sanctum) ಶನಿವಾರ(ಜೂ.22) ಭಾರೀ ಮಳೆಗೆ ನೀರು ಸೋರಿಕೆಯಾಗಿದೆ. ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಳೆ ನೀರು ಸೋರಿಕೆ ಖಚಿತಪಡಿಸಿದ್ದು, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಮಳೆಗೆ (Rain In Ayodhya) ದೇವಾಲಯದ ಗರ್ಭಗುಡಿಯ ಮೇಲ್ಛಾವಣಿಯಿಂದ ಭಾರೀ ನೀರು ಸೋರಿಕೆಯಾಗಿದೆ. ಮಳೆಗೆ ದೇವಸ್ಥಾನದ ಪವಿತ್ರ ಗರ್ಭಗುಡಿಯ ಚಾವಣಿಯಿಂದ ತೀವ್ರ ಸೋರಿಕೆಯಾಗಿದೆ. ಬಾಲರಾಮನ ವಿಗ್ರಹದ ಮುಂದೆ ಅರ್ಚಕರು ಕೂರುವ ಸ್ಥಳದಲ್ಲಿ, ವಿಐಪಿ ದರ್ಶನಕ್ಕಾಗಿ ಜನರು ಬರುವ ಸ್ಥಳದಲ್ಲಿಯೂ ನೀರು ಬೀಳುತ್ತಿದೆ. ಮಳೆಯ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ. ಹಿರಿಯ ಅಧಿಕಾರಿಗಳು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಚಾರ್ಯ ಸತ್ಯೇಂದ್ರ ದಾಸ್ ಆಗ್ರಹಿಸಿದ್ದಾರೆ.
ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆ ಖಚಿತಪಡಿಸಿರುವ ಮಂದಿರ ನಿಮಾರ್ಣ ಉಸ್ತುವಾರಿ ಹೊತ್ತಿದ್ದ ನೃಪೇಂದ್ರ ಮಿಶ್ರಾ, ಗುರು ಮಂಟಪ ಇರುವ ಮೊದಲ ಮಹಡಿಗೆ ಯಾವುದೇ ಮೇಲ್ಚಾವಣಿ ಇಲ್ಲ. ಮಳೆ ನೀರು ತುಂಬಿಕೊಂಡು ಗರ್ಭಗುಡಿಯಲ್ಲಿ ಸೋರಿಕೆಯಾಗಿದೆ. ಶೀಘ್ರವೇ ದುರಸ್ತಿ ಮಾಡಲಾಗುತ್ತದೆ. ಗರ್ಭಗುಡಿ ನಿರ್ಮಾಣದಲ್ಲಿ ಯಾವುದೇ ಲೋಪವಾಗಿಲ್ಲ. ಗುರುಮಂಟಪಕ್ಕೆ ಮೇಲ್ಚಾವಣಿ ಇಲ್ಲದ ಕಾರಣ ನೀರು ಸೋರಿಕೆಯಾಗಿದೆ. ಮೊದಲ ಮಹಡಿಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದು ಈ ವರ್ಷದ ಜುಲೈ ವೇಳೆಗೆ ಅಂತ್ಯಗೊಳ್ಳಲಿದೆ. ಡಿಸೆಂಬರ್ ಕೊನೆಗೆ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.
Click 👇