ನ್ಯೂಸ್ ನಾಟೌಟ್: ಸುಳ್ಯದ ಭಸ್ಮಡ್ಕ ಎಂಬಲ್ಲಿನ ಪಯಸ್ವಿನಿ ನದಿ ತಟದಲ್ಲಿ ಚಪ್ಪಲಿ ಇಟ್ಟು ನಾಪತ್ತೆಯಾಗಿರುವ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ.
ಕುಮಾರ್ ಕುರುಂಜಿಗುಡ್ಡೆ ಅನ್ನುವವರು ಭಾನುವಾರ (ಜೂ.೨೩) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು.. ವಿಶೇಷ ಚೇತನ ವ್ಯಕ್ತಿಯಾಗಿರುವ ಅವರು ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಭಾನುವಾರ ಮಧ್ಯಾಹ್ನ ಮನೆಯಲ್ಲಿ ಟೀವಿ ನೋಡುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಹೊರ ನಡೆದಿದ್ದಾರೆ. ಆ ಬಳಿಕ ವಾಪಸ್ ಮನೆಗೆ ಬಂದಿಲ್ಲ. ಹೀಗಾಗಿ ಮನೆಯವರು ಆತಂಕಗೊಂಡು ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾರೆ. ಆಗ ಆತನ ಚಪ್ಪಲಿ ಪಯಸ್ವಿನಿ ನದಿ ತಟದಲ್ಲಿ ಕಂಡು ಬಂದಿತ್ತು.
ಸೋಮವಾರ ಬೆಳಗ್ಗಿನಿಂದಲೇ ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರ ನೆರವಿನಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮಂಗಳವಾರ (ಜೂ.೨೫) ಬೆಳ್ ಬೆಳಗ್ಗೆ ಕಾರ್ಯಾಚರಣೆ ನಡೆಸಿದರೂ ಕುಮಾರ್ ಕುರುಂಜಿ ಗುಡ್ಡೆ ಅವರು ಪತ್ತೆಯಾಗಿರಲಿಲ್ಲ. ಹೀಗಾಗಿ ಪಯಸ್ವಿನಿ ನದಿಯ ಕೆಳ ಭಾಗದಲ್ಲಿಏನಾದರೂ ಹೋಗಿರಬಹುದು ಎನ್ನುವ ಕಾರಣದಿಂದ ಹುಡುಕಾಟ ನಡೆಸಲಾಯಿತು. ಸುಮಾರು 1 ಕಿ.ಮೀ. ವರೆಗೆ ಮೃತ ದೇಹ ತೇಲಿ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುಳ್ಯ ಅಗ್ನಿ ಶಾಮಕ ಸಿಬ್ಬಂದಿ ಅಗ್ನಿ ಶಾಮಕ ಸಿಬ್ಬಂದಿ ಕಲ್ಲಪ್ಪ, ಠಾಣಾಧಿಕಾರಿ ಸೋಮನಾಥ್ , ರಾಜೇಶ್ , ಮೈಲಾರಪ್ಪ ಗುರಿಕಾರ್, ರಫೀಕ್ ಹಾಗೂ ಹರ್ಷವರ್ಧನ್, ಪೊಲೀಸ್ ಸಿಬ್ಬಂದಿ ಪ್ರಕಾಶ್ , ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚು ಪ್ರಗತಿ, ಶೌರ್ಯ ವಿಪತ್ತು ತಂಡದ ಚಿದಾನಂದ ಸಂಪಾಜೆ, ನಾರಾಯಣ ಭಸ್ಮಡ್ಕ ಹಾಗೂ ಸುಳ್ಯದ ಆಂಬ್ಯುಲೆನ್ಸ್ ಚಾಲಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.