ನ್ಯೂಸ್ ನಾಟೌಟ್: ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳ ಅಧ್ಯಾಯವಾಗಿರುವ ತುರ್ತು ಪರಿಸ್ಥಿತಿʼಯು 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅಂದಿನ ಪ್ರಧಾನಿ ಇಂದಿರಾಗಾಂಧಿ (Indira Gandhi) ಅವರ ಸಲಹೆ ಮೇರೆಗೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ತುರ್ತು ಪರಿಸ್ಥಿತಿ ಜಾರಿಯಾಗಿ ಜೂನ್ 25ಕ್ಕೆ 50ನೇ ವರ್ಷ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನೆದು ಪ್ರಧಾನಿ ಮೋದಿ (Narendra Modi) ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲ ಮಹಾಪುರುಷರಿಗೆ ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸುವ ದಿನವಾಗಿದೆ. ತುರ್ತು ಪರಿಸ್ಥಿತಿಯಿಂದ ಕಾಂಗ್ರೆಸ್ ಪಕ್ಷವು (Congress Party) ಮೂಲಭೂತ ಸ್ವಾತಂತ್ರ್ಯವನ್ನು ಹೇಗೆ ಬುಡಮೇಲು ಮಾಡಿತ್ತು? ಹಾಗೂ ಪ್ರತಿಯೊಬ್ಬ ಭಾರತೀಯರು ಗೌರವಿಸುವ ಸಂವಿಧಾನವನ್ನು (Constitution Of India) ಹೇಗೆ ತುಳಿಯಿತು? ಎಂಬುದನ್ನು ನಮಗೆ ನೆನಪಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಹೇರಲು ಕಾರಣವಾದ ಮನಸ್ಥಿತಿಯು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿದೆ. ಅವರು ತಮ್ಮ ಟೋಕನಿಸಂ ಮೂಲಕ ಸಂವಿಧಾನದ ಬಗ್ಗೆ ತಮ್ಮ ತಿರಸ್ಕಾರ ಮನೋಭಾವವನ್ನು ಮರೆಮಾಚುತ್ತಾರೆ. ತುರ್ತು ಪರಿಸ್ಥಿತಿ ಹೇರಿದವರಿಗೆ ನಮ್ಮ ಸಂವಿಧಾನದ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುವ ಹಕ್ಕು ಇಲ್ಲ. ಆದ್ರೆ ದೇಶದ ಜನರು ಅವರ ಭಾವನೆಗಳನ್ನು ವರ್ತನೆಗಳ ಮೂಲಕ ನೋಡಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನ ತಿರಸ್ಕಾರ ಮಾಡಿದ್ದಾರೆ’ ಎಂದು ಮೋದಿ ಕಿಡಿ ಕಾರಿದ್ದಾರೆ.
Click 👇