ನ್ಯೂಸ್ ನಾಟೌಟ್: ಮುಸ್ಲಿಂ ಜನ ಸಂಖ್ಯೆ ಹೆಚ್ಚಿರುವ ರಷ್ಯಾದ ದಾಗೆಸ್ತಾನ್ ಪ್ರಾಂತ್ಯ ಭೀಕರ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿದ್ದು, ಈಗ ಎಲ್ಲಾ ದಾಳಿಕೋರರನ್ನೂ ಹೊಡೆದುರುಳಿಸಿರುವುದಾಗಿ ರಷ್ಯಾ ಸರ್ಕಾರ ಹೇಳಿಕೊಂಡಿದೆ.
ರಷ್ಯಾದ ದಾಗೆಸ್ತಾನ್ ಪ್ರಾಂತ್ಯದ ಒಂದು ಚರ್ಚ್ ಹಾಗೂ ಯಹೂದಿಗಳ ಎರಡು ಪ್ರಾರ್ಥನಾ ಮಂದಿರಗಳ ಮೇಲೆ ಭಾನುವಾರ(ಜೂ.23) ಉಗ್ರರು ದಾಳಿ ನಡೆಸಿದ್ದರು. ಉಗ್ರರ ಭೀಕರ ದಾಳಿಯಿಂದಾಗಿ 16 ಮಂದಿ ಸಾವನ್ನಪ್ಪಿದ್ದರು.
ಕೂಡಲೇ ಕಾರ್ಯಾಚರಣೆ ಕೈಗೊಂಡ ರಷ್ಯಾದ ಭದ್ರತಾ ಸಿಬ್ಬಂದಿ ಎಲ್ಲಾ 6 ಭಯೋತ್ಪಾದಕರನ್ನು ಹೊಡೆದುರುಳಿಸಿರುವುದಾಗಿ ಮಾಹಿತಿ ನೀಡಿದೆ. ಈ ಉಗ್ರರು ಯಾವ ಉಗ್ರಗಾಮಿ ಸಂಘಟನೆಗೆ ಸೇರಿದವರು ಎಂದು ಈವರೆಗೂ ಬಹಿರಂಗವಾಗಿಲ್ಲ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಯುತ್ತಿದ್ದು, ಉಗ್ರರ ಸಂಚು ಹಾಗೂ ಅವರಿಗೆ ಬೆಂಬಲ ನೀಡಿದವರ ಕುರಿತಾಗಿ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.
Click 👇