ಪುತ್ತೂರು: ಇಲ್ಲಿನ ಉರ್ಲಾಂಡಿ ಎಂಬಲ್ಲಿ ಹವಾ ನಿಯಂತ್ರಕ ಹಾಗೂ ರೆಫ್ರಿಜರೇಟರ್ ರಿಪೇರಿ ಅಂಗಡಿಯೊಂದರಲ್ಲಿ ಇಂದು ಬೆಂಕಿ ಹೊತ್ತಿ ಉರಿದ ಪರಿಣಾಮ 25 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಬೈಪಾಸ್ ರಸ್ತೆಯಲ್ಲಿರುವ ಸುಶ್ರುತ ಆಸ್ಪತ್ರೆ ಬಳಿಯ ಕೃಷ್ಣ ಕಾಂಪ್ಲೆಕ್ಸ್ ನಲ್ಲಿರುವ ವಿವೇಕ್ ಮಾಲೀಕತ್ವದ ಸುರಭಿ ಬೆಂಕಿ ಗಾಹುತಿಯಾದ ಅಂಗಡಿಯಾಗಿದೆ. ದುರ್ಘಟನೆ ಸಂಭವಿಸಿದ ವೇಳೆ ಅಂಗಡಿಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಸಿಬ್ಬಂದಿ ಕಾರ್ಯ ನಿಮಿತ್ತ ಹೊರಗಡೆ ಹೋಗಿದ್ದಾಗ ಘಟನೆ ಸಂಭವಿಸಿದೆ. ಅಂಗಡಿ ಒಳಗಿನಿಂದ ಜೋರಾದ ಶಬ್ಧ ಕೇಳಿ ಬಂದಿದ್ದರಿಂದ ಅಕ್ಕಪಕ್ಕದ ಅಂಗಡಿಯವರು ಶೆಟರ್ ಎಳೆದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.