ನ್ಯೂಸ್ ನಾಟೌಟ್: ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಯೋಗಪಟು ಶರತ್ ಕುಮಾರ್ ಎಂ.ಎಸ್. ಉದ್ಘಾಟಿಸಿ ಯೋಗದಿಂದಾಗುವ ಪ್ರಯೋಜನದ ಬಗ್ಗೆ ವಿವರಿಸಿದರು.
ಖ್ಯಾತ ಯೋಗಪಟು ಅಕ್ಷಯ ಬಾಬ್ಲುಬೆಟ್ಟು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರು ದಯಾಮಣಿ ಕೆ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು . ಉಪನ್ಯಾಸಕ ದಾಮೋದರ ಎನ್. ವಂದಿಸಿದರು. ಉಪನ್ಯಾಸಕಿ ಸ್ವರ್ಣಕಲಾ ಎ.ಎಸ್. ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಉಪನ್ಯಾಸಕ ಬಾಲಚಂದ್ರ ಕಾರ್ಯಕ್ರಮವನ್ನು ಸಂಘಟಿಸಿದರು. ಸಂಸ್ಥೆಯ ಬೋಧಕ, ಬೋಧಕೇತರ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.