ಪೆರಾಜೆ: ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕಿಮೋ ಥೆರಪಿಗೆ ಒಳಗಾಗಿ ತಲೆ ಕೊದಲು ಕಳೆದುಕೊಂಡಿರುವ ರೋಗಿಗಳ ಸಹಾಯಕ್ಕಾಗಿ ಕೆರೆಮೂಲೆ ಮನೆಯ ರವಿಚಂದ್ರ ಪೆರಾಜೆ (32) ಯವರು ತಮ್ಮ ತಲೆ ಕೂದಲನ್ನು ದಾನ ಮಾಡಿ ಸುದ್ದಿಯಾಗಿದ್ದಾರೆ.
ಅವರು ಅಮೃತಕೇಶ ಕೂದಲು ದಾನ ಅಭಿಯಾನದಡಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ರವಿಚಂದ್ರ ಅವರ ಸಾಮಾಜಿಕ ಕಳಕಳಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿರುವ ರವಿಚಂದ್ರ ಅವರು, ನನ್ನ ಕಡೆಯಿಂದ ಇದೊಂದು ಅಳಿಲು ಸೇವೆ. ಇಂತಹ ಕೆಲಸದಲ್ಲಿ ನನಗೆ ಆತ್ಮತೃಪ್ತಿಯಿದೆ ಎಂದು ತಿಳಿಸಿದ್ದಾರೆ.