ನ್ಯೂಸ್ ನಾಟೌಟ್ : ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ ಬಳಿಕ ಪಟ್ಟಣಗೆರೆ ಶೆಡ್ ಭಾರಿ ಸುದ್ದಿಯಾಗಿದೆ. ಈ ಬೆನ್ನಲ್ಲೇ ಪಟ್ಟಣಗೆರೆ ಶೆಡ್ ಮಾಲಿಕನಿಗೆ ಬಿಬಿಎಂಪಿ ಶಾಕ್ ನೀಡಿದೆ.
ರೇಣುಕಾಸ್ವಾಮಿಯನ್ನ ಹತ್ಯೆ ಮಾಡಿದ ಸ್ಥಳವಾದ ಪಟ್ಟಣಗೆರೆ ಶೆಡ್ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೋಟಿಸ್ ನೀಡಿದೆ. 2008 – 09 ರಿಂದ ಆಸ್ತಿ ತೆರಿಗೆ ಪಾವತಿ ಆಗಿಲ್ಲ ಎಂದು ಕೆಂಗೇರಿ ಉಪ ವಲಯದಲ್ಲಿ ಸಹಾಯಕ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನೋಟೀಸ್ ನಲ್ಲಿ 15 ದಿನಗಳ ಒಳಗೆ ಆಸ್ತಿ ತಮ್ಮದೇ ಅಂತಾ ಘೋಷಿಸಿಕೊಂಡು ತೆರಿಗೆ ಪಾವತಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಒಂದು ವೇಳೆ 15 ದಿನಗಳ ಒಳಗೆ ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ದರ್ಶನ್ ಕೇಸ್ ನಲ್ಲಿ ಶೆಡ್ ಸುದ್ದಿಯಾದ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಇನ್ನೂ ಅದೆಷ್ಟೋ ಆಸ್ತಿಗಳ ತೆರಿಗೆ ಈ ರೀತಿಯೇ ಬಾಕಿ ಇರಬಹುದು ಎಂದು ಶಂಕಿಸಲಾಗಿದೆ.
Click 👇