ಸುಳ್ಯ: ಇಲ್ಲಿನ ಬೈರಾ ಸಮಾಜದ ಕ್ರೀಡಾಕೂಟ ಏಪ್ರಿಲ್ 3 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ ಇಂಜಿನಿಯರ್ ರಾಮ ಬೇಲ್ಯ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಯಣ ಕುರುಂಜಿಬಾಗ್ ವಹಿಸಿದ್ದರು. ವೇದಿಕೆಯಲ್ಲಿ ಯಲ್ಲಿ ದಾಮೋದರ ಜಟ್ಟಿಪಳ್ಳ ಉಪಸ್ಥಿತರಿದ್ದರು. ದೇಶಕ್ಕೆ ವ್ಯಾಪಿಸಿದ ಕರೋನಾ ಸಮಯದಲ್ಲಿ ಸಮಾಜದ ಬಾಂಧವರಿಗೆ ಯಾವುದೇ ಆಟೋಟ ಹಾಗೂ ಇನ್ನಿತರ ಕಾರ್ಯಕ್ರಮಗಳು ಇಲ್ಲದಿರುವುದರಿಂದ ಮಹಿಳೆಯರಿಗೆ,ಹಗ್ಗ ಜಗ್ಗಾಟ, ಥ್ರೋಬಾಲ್, ಪುರುಷರಿಗೆ ಕ್ರಿಕೆಟ್ ಪಂದ್ಯಾಟ ಮತ್ತು ಮಕ್ಕಳಿಗೆ 100 ಮಿ ಓಟ, ಚೀಟಿ ಹೆಕ್ಕಿ ಅಭಿನಯ ,ಲಿಂಬೆ ಚಮಚ ಸೇರಿದಂತೆ ವಿವಿಧ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ಕ್ರಿಕೆಟ್ ಪಂದ್ಯಾಟದಲ್ಲಿ ಜಿಲ್ಲೆಯಿಂದ ಒಟ್ಟು 10 ತಂಡಗಳು ಬಾಗವಹಿಸಿ ನಾಕೌಟ್ ಮಾದರಿಯಲ್ಲಿ ನಡೆಸಲಾಯಿತು. ಫೈನಲ್ ಪಂದ್ಯಾಟದಲ್ಲಿ ಪಡಾರು ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ, ಕಲ್ಲಡ್ಕ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರೋಚಕ ಪಂದ್ಯಾಟದಲ್ಲಿ ಪಡಾರು ತಂಡ ಗೆದ್ದು ಪ್ರಥಮ ಟ್ರೋಫಿ ಮತ್ತು ನಗದು ಬಹುಮಾನವನ್ನು ಪಡೆಯಿತು. ಕಲ್ಲಡ್ಕ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದು ಕೊಂಡಿತು.
ಸಮಾರೋಪ ಸಮಾರಂಭದದಲ್ಲಿ ಕ್ರೀಡಾ ಪಟುಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಆನಂದ ಜಟ್ಟಿಪಳ್ಳ, ಗಂಗಾಧರ್ ಮಿತ್ತಡ್ಕ, ರಾಮ ಬೆಳ್ಳಾರೆ, ಸೀತಾರಾಮ ಬಿನಡ್ಕ, ಗಿರಿಜಾ ಜಾಲ್ಸೂರು, ಪ್ರೇಮ ಸುಳ್ಯ, ನಾರಯಣ ಜಟ್ಟಿಪಳ್ಳ, ರಮೇಶ್ ಮುಂಡುಗಾರು ಉಪಸ್ಥಿತರಿದ್ದರು. ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು.