ನ್ಯೂಸ್ ನಾಟೌಟ್: ಖಾಸಗಿ ಶಾಲೆಯ ಆವರಣಕ್ಕೆ ಶುಕ್ರವಾರ(ಜೂ.14) ಚಿರತೆಯೊಂದು ನುಗ್ಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದಿದೆ. ಚಿರತೆಯ ಹುಟುಕಾಟ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಮುಂದಿನ ಮೂರು ದಿನಗಳ ಕಾಲ ತಿರುಪತ್ತೂರಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ ಎನ್ನಲಾಗಿದೆ.
ಸಂಜೆ 4 ಗಂಟೆ ಸುಮಾರಿಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗೆ ಬಂದ ಪೋಷಕರು ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಶಾಲೆಯ ಆವರಣದಲ್ಲಿ ಚಿರತೆಯನ್ನು ಕಂಡಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಬಳಿಕ, ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವಂತೆ ನೋಡಿಕೊಂಡರು ಎಂದು ವರದಿ ತಿಳಿಸಿದೆ. “ಪ್ರಾರಂಭದಲ್ಲಿ ಬಲೆಗಳ ಸಹಾಯದಿಂದ ಚಿರತೆಯನ್ನು ಹಿಡಿಯಲು ಯೋಜನೆ ಹಾಕಿಕೊಂಡೆವು. ಆದರೆ ಚಿರತೆಯು ಕ್ಯಾಂಪಸ್ ನ ಪೊದೆಗಳಲ್ಲಿ ಅಡಗಿಕೊಂಡಿದ್ದರಿಂದ ಆ ಯೋಜನೆ ಕೈ ಬಿಡಲಾಯಿತು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಯಚರಣೆ ಮುಂದುವರಿದಿದೆ.
Click 👇