ನ್ಯೂಸ್ ನಾಟೌಟ್: ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನುವ ಮಾತಿದೆ. ಅಂತೆಯೇ ಕೆಲವು ಸಲ ಮಹಿಳೆಯರು ವರ್ತಿಸುವುದು ಕೂಡ ಇದೆ. ರಸ್ತೆಯಲ್ಲಿ ಪರಸ್ಪರ ಪುರುಷರು ಮಾತ್ರ ಹೊಡೆದಾಡುವುದಲ್ಲ, ನಾವು ಕೂಡ ಯಾವುದರಲ್ಲೂ ಕಮ್ಮಿ ಇಲ್ಲ ಅಂತ ಇಲ್ಲಿಬ್ಬರು ಮಹಿಳೆಯರು ನಿರೂಪಿಸಿ ತೋರಿಸಿದ್ದಾರೆ.
ಹೌದು, ಚಲಿಸುತ್ತಿರುವ ಬಸ್ ನಲ್ಲಿ ಸೀರೆ, ಜಡೆ ಹಿಡಿದುಕೊಂಡೇ ಈ ಇಬ್ಬರು ಮಹಿಳೆಯರು ಪರಸ್ಪರ ಮಾರಾಮಾರಿ ಬಡಿದಾಡಿಕೊಂಡಿದ್ದಾರೆ. ಡಿಬ್ಬ..ಡಿಬ್ಬ ಪೆಟ್ಟಿಗೆ ಸಹ ಪ್ರಯಾಣಿಕರು ಮಾತ್ರ ಮೂಕ ಪ್ರೇಕ್ಷಕರಾಗಿ ನಿಂತಿದ್ದಾರೆ. ಹೀಗೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿರುವುದು ತೆಲಂಗಾಣದಲ್ಲಿ. ಸೀಟಿಗಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಇಬ್ಬರು ಮಹಿಳೆಯರು ಪರಸ್ಪರ ಸೀರೆ, ಜಡೆ ಹಿಡಿದುಕೊಂಡು ಚೆನ್ನಾಗಿಯೇ ಹೊಡೆದಾಡಿಕೊಂಡಿದ್ದಾರೆ. ಚಲಿಸುತ್ತಿರುವ ಬಸ್ ನಲ್ಲೇ ಇಂತಹದೊಂದು ಘಟನೆ ನಡೆದಿದ್ದು ಪರಸ್ಪರ ಕಪಾಳಮೋಕ್ಷ ಕೂಡ ಆಗಿದೆ.
@TeluguScribe ಎಂಬ ಟ್ವಿಟರ್ ಖಾತೆಯಲ್ಲಿ ಜೂನ್ 11ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಹಂಚಿಕೊಂಡ ಕೇವಲ ಎರಡು ದಿನಗಳಲ್ಲಿ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಇದು ಫ್ರೀ ಬಸ್ ಪ್ರಭಾವ ” ಎಂದು ಕಾಮೆಂಟ್ ಮಾಡಿದ್ದಾರೆ. ಹೈದರಾಬಾದ್ನಿಂದ ನಾಗರ್ ಕರ್ನೂಲ್ ಗೆ ಪ್ರಯಾಣಿಸುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.