ನ್ಯೂಸ್ ನಾಟೌಟ್: ಯಾವ ಸಿನಿಮಾ ಕಥೆಗೂ ಈ ಸ್ಟೋರಿ ಕಡಿಮೆ ಏನಿಲ್ಲ. ಅನ್ಯಕೋಮಿನ ಇಬ್ಬರು ವಿದ್ಯಾರ್ಥಿಗಳ ಜೊತೆಗೆ ಹಿಂದೂ ಯುವತಿ BMW ಕಾರಿನಲ್ಲಿ ತೆರಳಿ ಮೋಜು ಮಸ್ತಿ ಮಾಡಿದ್ದಾಳೆ ಅನ್ನುವ ಆರೋಪ ಕೇಳಿ ಬಂದಿದ್ದು ಸಾರ್ವಜನಿಕರು ಕಾರಿನಲ್ಲಿದ್ದ ತಂಡವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
BMW ಕಾರಿನಲ್ಲಿ ಅನ್ಯಕೋಮಿನ ಇಬ್ಬರು ಯುವಕರ ಜೊತೆಗೆ ಹಿಂದೂ ಯುವತಿ ಸುತ್ತಾಟ ನಡೆಸುತ್ತಿದ್ದಳು, ಜ್ವಾಲಿ ರೈಡ್ ನಲ್ಲಿ ಮೋಜು ಮಸ್ತಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನ ಮುಕ್ಕ ಎಂಬಲ್ಲಿ ಸ್ಕೂಲ್ ಬಸ್ ವೊಂದಕ್ಕೆ ಇವರು ಪ್ರಯಾಣಿಸುತ್ತಿದ್ದ BMW ಕಾರು ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳ ನಡುವೆ ಜಿದ್ದಾಜಿದ್ದಿನ ಮಾತಿನ ಸಮರ ನಡೆದಿದೆ. ಜನ ಹೆಚ್ಚು ಸೇರುತ್ತಿದ್ದಂತೆ ಅವರು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಅನುಮಾನಗೊಂಡ ಸ್ಥಳೀಯರು ಅವರನ್ನು ಹೆಚ್ಚಿನ ವಿಚಾರಣೆ ನಡೆಸಲು ಯತ್ನಿಸುತ್ತಿದ್ದಾಗ ಕಾರು ಹತ್ತಿ ಪರಾರಿಯಾಗುವುದಕ್ಕೆ ಯತ್ನಿಸಿದ್ದಾರೆ. ಕಾರು ಸ್ಟಾರ್ಟ್ ಆಗದೆ ಕೈಕೊಟ್ಟಿದೆ. ಈ ವೇಳೆ ಇದು ಅನ್ಯಕೋಮಿನ ಜೋಡಿ ಅನ್ನುವುದು ಜನರ ಗಮನಕ್ಕೆ ಬಂದಿದೆ.
BMW ಕಾರಿಗೆ ಫುಲ್ ಟಿಂಟ್ ಅಳವಡಿಕೆ ಮಾಡಲಾಗಿತ್ತು. ಈ ಕಾರಣದಿಂದ ಹಲವರಿಗೆ ಅನುಮಾನ ಹೆಚ್ಚಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಠಾಣೆಗೆ ಪೋಷಕರನ್ನು ಕರೆಸಿ ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸಿಕೊಡಲಾಗಿದೆ.
ಮೂವರು ಕೂಡ ವಿದ್ಯಾರ್ಥಿಗಳಾಗಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿಗೆ ಸೇರಿದವರಾಗಿದ್ದಾರೆಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳ ಹಿಂದೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಎಂಬಲ್ಲಿ ಲವ್ ಜಿಹಾದ್ ಪ್ರಕರಣ ಸದ್ದು ಮಾಡಿತ್ತು. ಮುಸ್ಲಿಂ ಲೀಗ್ ನಾಯಕನೊಬ್ಬ ಲವ್ ಜಿಹಾದ್ ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಸರಗೋಡಿನಲ್ಲಿ ವಿಎಚ್ ಪಿ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.
ಮೇ 23ರಂದು ಮನೆಯಿಂದ ಹೊರ ಹೋಗಿದ್ದ ಯುವತಿ ದಿಢೀರ್ ನಾಪತ್ತೆಯಾಗಿದ್ದಳು. ಆಕೆಗಾಗಿ ಹುಡುಕಾಟ ನಡೆಸಿದಾಗ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿ ಬೋರ್ಡ್ನಲ್ಲಿ ಅನ್ಯಕೋಮಿನ ಯುವಕನೊಂದಿಗೆ ಭಾವಚಿತ್ರಗಳ ಸಹಿತ ನೋಟೀಸ್ ಪತ್ತೆಯಾಗಿತ್ತು. ರಿಜಿಸ್ಟರ್ ಕಚೇರಿಯಲ್ಲಿ ಯುವತಿ ಮತ್ತು ಮಿರ್ಶಾದ್ ಮದುವೆಯಾಗಿರುವುದು ತಿಳಿದುಬಂದಿತ್ತು. ಮದುವೆಯಾದ ನಂತರ ಮೇ 27ರಂದು ಬದಿಯಡ್ಕ ಠಾಣೆಗೆ ಜೋಡಿ ಹಾಜರಾಗಿತ್ತು.