ಅಡೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಅಡೂರು ಪಾಂಡಿಯಲ್ಲಿ ಹೆತ್ತ ಅಪ್ಪನನ್ನು ಮಗ ಹೊಡೆದು ಕೊಂದ ಘಟನೆ ನಡೆದಿದೆ. ಪಾಂಡಿ ವೆಳ್ಳರಿಕಾಯಂ ಕಾಲೋನಿಯ ಬಾಲಕೃಷ್ಣ ನಾಯ್ಕ್ (56) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಅಪ್ಪನ ಕುಡಿತ ದುರಂತಕ್ಕೆ ಕಾರಣ?
ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ಜಗಳ ನಡೆದಿದೆ. ಬಳಿಕ ಅದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಆರೋಪಿ, ಮಗ ನರೇಂದ್ರ ಪ್ರಸಾದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಬಾಲಕೃಷ್ಣ ನಾಯ್ಕ್ ದೇಹದಲ್ಲಿ ಬಲವಾದ ಗಾಯಗಳೇನೂ ಪತ್ತೆಯಾಗಿಲ್ಲ. ಆದರೆ ಮನೆಯೊಳಗಿನ ಕೊಠಡಿಯೊಂದರಲ್ಲಿ ರಕ್ತಹೆಪ್ಪುಕಟ್ಟಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಅತಿಯಾಗಿ ಕುಡಿತದ ಚಟವಿರುವ ಕಾರಣ ಆಗಾಗ ಪತ್ನಿಯನ್ನು ಹಲ್ಲೆಗೈಯುತಿದ್ದನೆಂದು ಹೇಳಲಾಗಿದೆ. ಇದೇ ವಿಷಯದಲ್ಲಿ ತಂದೆ ಹಾಗೂ ಪುತ್ರನ ಮದ್ಯೆ ವಾಕ್ ತರ್ಕ ಉಂಟಾಗಿ ಬಳಿಕ ಅದು ಕೊಲೆಯಲ್ಲಿ ಅಂತ್ಯ ಕಂಡಿದೆ ಎನ್ನಲಾಗಿದೆ.