ನ್ಯೂಸ್ ನಾಟೌಟ್: ತಮಿಳುನಾಡಿನ ದೇವಸ್ಥಾನದಿಂದ ಕಳ್ಳತನವಾಗಿದ್ದ 500 ವರ್ಷಗಳಷ್ಟು ಹಳೆಯದಾದ ಸಂತ ತಿರುಮಂಕೈ ಆಳ್ವರ ಕಂಚಿನ ವಿಗ್ರಹವನ್ನು ಭಾರತಕ್ಕೆ ಹಿಂದಿರುಗಿಸಲು ಬ್ರಿಟನ್ನ ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಒಪ್ಪಿಕೊಂಡಿದೆ ಎಂದು ವರದಿ ತಿಳಿಸಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಕೌನ್ಸಿಲ್ ಅಶ್ಮೋಲಿಯನ್ ಮ್ಯೂಸಿಯಂನಿಂದ 15 ನೇ ಶತಮಾನದ ಸಂತ ತಿರುಮಂಕೈ ಆಳ್ವಾರ ಕಂಚಿನ ಶಿಲ್ಪವನ್ನು ಹಿಂದಿರುಗಿಸಲು ಭಾರತೀಯ ಹೈಕಮಿಷನ್ ನ ಮನವಿಯನ್ನು ವಿಶ್ವವಿದ್ಯಾಲಯವು ಇಂದು(ಜೂ.11) ಒಪ್ಪಿಕೊಂಡಿದೆ. 60 ಸೆಂ.ಮೀ ಎತ್ತರದ ಸಂತ ತಿರುಮಂಕೈ ಆಳ್ವರ ಪ್ರತಿಮೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಅಶ್ಮೋಲಿಯನ್ ಮ್ಯೂಸಿಯಂ 1967 ರಲ್ಲಿ ಡಾ ಜೆ ಆರ್ ಬೆಲ್ಮಾಂಟ್ (1886-1981) ಎಂಬ ಸಂಗ್ರಾಹಕನ ಸಂಗ್ರಹದಿಂದ ಹರಾಜಿನಲ್ಲಿ ಆಕ್ಸ್ಫರ್ಡ್ ಪಡೆದುಕೊಂಡಿತ್ತು. ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಕೆಲವು ಕಲೆ ಮತ್ತು ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳನ್ನು ಹೊಂದಿರುವ ವಸ್ತುಸಂಗ್ರಹಾಲಯವು, 1967 ರಲ್ಲಿ ಈ ವಿಗ್ರಹವನ್ನು ಸದುದ್ದೇಶದಿಂದ ಇಲ್ಲಿ ಇರಿಸಿಕೊಂಡಿತ್ತು ಎಂದು ವಿಶ್ವವಿದ್ಯಾಲಯ ತಿಳಿಸಿದೆ.
Click 👇