ನ್ಯೂಸ್ ನಾಟೌಟ್: ರಾಜ್ಯದ ವಿವಿಧ ಭಾಗಗಳಲ್ಲಿ ಇದೀಗ ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಹೆಸರು ಕೇಳಿ ಬರುತ್ತಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯ ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಿಂದ ಇಂತಹ ಸಾಧನೆ ಹೇಗೆ ಮಾಡೋಕೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಆದರೆ ಇಲ್ಲಿನ ಶಿಕ್ಷಣ ಸಂಸ್ಥೆ ಎಲ್ಲರ ನಿರೀಕ್ಷೆಯನ್ನು ಮೀರಿ ಬೆಳೆದು ನಿಂತಿದೆ ಅನ್ನೋದೇ ವಿಶೇಷ. ಇದೀಗ ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ತರಬೇತಿ ಪಡೆದವರೆಲ್ಲ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕಿಯರಾಗಿ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಅಭಿವೃದ್ಧಿ ಏಜನ್ಸಿ ಭಾರತ್ ಸೇವಕ ಸಮಾಜದ ಅಂಗೀಕೃತ ಸಂಸ್ಥೆಯಾಗಿರುವ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ(ಡಿ.ಎಂ.ಇ.ಡಿ) ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯೊಂದಿಗೆ ಉತ್ತೀರ್ಣರಾಗಿದ್ದರು. ಇದೀಗ ಎಲ್ಲರಿಗೂ ಕೂಡ ಉದ್ಯೋಗ ಸಿಕ್ಕಿದೆ ಅನ್ನೋದನ್ನು ಸಂಸ್ಥೆ ಖುಷಿಯಿಂದಲೇ ಹೇಳಿಕೊಂಡಿದೆ.
ಕಾಂಚನ (ಕೆವಿಜಿ ಐ.ಪಿ.ಎಸ್ ಸುಳ್ಯ), ಪೂರ್ಣಿಮಾ (ವಿದ್ಯಾರಶ್ಮಿ ವಿದ್ಯಾಲಯ ಸವಣೂರು), ಫಾತಿಮತ್ ರೋಝ (ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟು), ಮೇಘನಾ ಕೆ. ಎಸ್ (ಪಾಂಚಜನ್ಯ ಪಬ್ಲಿಕ್ ಸ್ಕೂಲ್ ಕೆ ಆರ್ ಪೇಟೆ ಮಂಡ್ಯ), ಗುಣಶ್ರೀ (ಗಜಾನನ ಇಂಗ್ಲೀಷ್ ಮೀಡಿಯಂ ಸ್ಕೂಲ್ ಈಶ್ವರಮಂಗಲ), ಸುಚಿತ್ರಾ (ಪಾಂಚಜನ್ಯ ಪಬ್ಲಿಕ್ ಸ್ಕೂಲ್ ಕೆ ಆರ್ ಪೇಟೆ ಮಂಡ್ಯ), ಫಾತಿಮತ್ ತೌಸೀರ (ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು), ಗ್ರೀಷ್ಮ ಕೆ. ಎಸ್. ಜಿ (ಆಂಗ್ಲ ಮಾಧ್ಯಮ ಶಾಲೆ ನಿಂತಿಕಲ್), ಶಾಹಿನಾ ದಾರುಲ್ (ಹಿಕ್ಮ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಾರೆ), ರಚನಾ (ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು), ಐಶ್ವರ್ಯರಾಜ್ (ದಾರುಲ್ ಹಿಕ್ಮ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಾರೆ), ಪ್ರಮೀಳಾ (ಅಂಜಲಿ ಮೊಂಟೆಸ್ಸರಿ ಸ್ಕೂಲ್ ಸುಳ್ಯ), ರಕ್ಷಿತಾ (ಮೌಂಟ್ ಜಿಯೋನ್ ಪಬ್ಲಿಕ್ ಸ್ಕೂಲ್ ನೆಟ್ಟಣ), ರಂಜಿತಾ (ಅಂಜಲಿ ಮೊಂಟೆಸ್ಸರಿ ಸ್ಕೂಲ್ ಸುಳ್ಯ), ಬೃಂದಶ್ರೀ (ವಿವೇಕ ಸ್ಕೂಲ್ ಅಜ್ಜಾವರ) ಇಲ್ಲಿಗೆ ಕ್ರಮವಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯಲ್ಲಿ 2024-25ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಆರಂಭಗೊಂಡಿದೆ. ತರಬೇತಿ ಪಡೆಯಲಿಚ್ಚಿಸುವ ಆಸಕ್ತರು ಹೆಚ್ಚಿನ ಮಾಹಿತಿಗೆ 9845713297 ಸಂಸ್ಥೆಯ ಕಚೇರಿಯ ಮೊಬೈಲ್ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
Click 👇