ನ್ಯೂಸ್ ನಾಟೌಟ್ : ಇಂದು(ಜೂ.7) 11 ಗಂಟೆಗೆ ಮಾನನಷ್ಟ ಮೊಕದ್ದಮೆ ವಿಚಾರಣೆ ಎದುರಿಸಲು ರಾಹುಲ್ ಗಾಂಧಿ ಜನಪ್ರತಿನಿಧಿಗಳ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಬೆಳಿಗ್ಗೆ ಒಂಬತ್ತು ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಂದಿಳಿದಿದ್ದು, ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬರಮಾಡಿಕೊಂಡರು ಎಂದು ವರದಿ ತಿಳಿಸಿದೆ.
ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಏರ್ಪೋರ್ಟ್ಗೆ ಆಗಮಿಸಿದ ಡಿಕೆಶಿ, “ಬಿಜೆಪಿಯವರು ರಾಹುಲ್ ಗಾಂಧಿ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. 2500 ಕೋಟಿಗೆ ಸಿಎಂ ಸ್ಥಾನ ಮಾರಾಟವಾಗಿದೆ ಅಂತ ಅಂದು ಪೇಪರ್ಗಳಲ್ಲಿ ಬಂದಿತ್ತು. ಅದಕ್ಕೆ ನಾನು ಸಿದ್ದರಾಮಯ್ಯ 40 ಪರ್ಸೆಂಟ್ ಅಂತ ಜಾಹಿರಾತು ಕೊಟ್ಟಿದ್ದೆವು. ಇದರಲ್ಲಿ ರಾಹುಲ್ ಗಾಂಧಿ ಪಾತ್ರವಿಲ್ಲ. ಆ ಸಮಯದಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಿರಲಿಲ್ಲ” ಎಂದು ಹೇಳಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಮಾನನಷ್ಟ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಕಳೆದ ಬಾರಿ ಇದರ ವಿಚಾರಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಇವರಿಬ್ಬರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಆದರೆ ರಾಹುಲ್ ಗಾಂಧಿ ಆಗಮಿಸಿರಲಿಲ್ಲ. ಇದರಿಂದ ಗರಂ ಆಗಿದ್ದ ನ್ಯಾಯಾಧೀಶರು, ಮುಂದಿನ ಬಾರಿ ರಾಹುಲ್ ಖುದ್ದು ಹಾಜರಿರುವಂತೆ ನಿರ್ದೇಶನ ನೀಡಿತ್ತು ಎನ್ನಲಾಗಿದೆ. ಈ ಪ್ರಕರಣವನ್ನು ಬಿಜೆಪಿ ಕಾರ್ಯದರ್ಶಿ ಎಂಎಲ್ಸಿ ಕೇಶವಪ್ರಸಾದ್ ದಾಖಲಿಸಿದ್ದರು.
Click 👇