ನ್ಯೂಸ್ ನಾಟೌಟ್ : ನಕಲಿ ಆಧಾರ್ ಕಾರ್ಡ್ ತೋರಿಸಿ ಸಂಸತ್ ಭವನ ಪ್ರವೇಶಿಸಲು ಮೂವರು ಯತ್ನಿಸಿರುವ ಘಟನೆ ಜೂನ್ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದುಕೊಂಡು ಸಂಸತ್ ಪ್ರವೇಶಿಸಿದ್ದ ಘಟನೆ ಡಿಸೆಂಬರ್ 2023ರಂದು ನಡೆದಿತ್ತು, ಈಗ ಅಂತಹದ್ದೇ ಘಟನೆ ನಡೆದಿದ್ದು, ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ನಕಲಿ ಆಧಾರ್ ಕಾರ್ಡ್ ತೋರಿಸಿ ಸಂಸತ್ ಭವನ ಪ್ರವೇಶಿಸಲು ಮುಂದಾದ ಮೂವರನ್ನು ಸಿಐಎಸ್ಎಫ್ ವಶಕ್ಕೆ ಪಡೆದಿದೆ.
ಕಾಸಿಂ, ಮೋನಿಸ್ ಮತ್ತು ಶೋಯೆಬ್ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳು ಕಾರ್ಮಿಕರಂತೆ ನಟಿಸಿ ಗೇಟ್ ಸಂಖ್ಯೆ 3 ರಿಂದ ಸಂಸತ್ ಭವನದ ಒಳ ಪ್ರವೇಶಿಸಲು ಪ್ರಯತ್ನಿಸಿದರು. ಈ ಮೂವರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 19/465/468/471/120B ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ಪ್ರಕಾರ, ಜೂನ್ 4ರಂದು ಮಧ್ಯಾಹ್ನ 1.30ಕ್ಕೆ ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.