ನ್ಯೂಸ್ ನಾಟೌಟ್ : ನೋಟಾ ಮತದ ಬಗ್ಗೆ ವರ್ಷದಿಂದ ವರ್ಷಕ್ಕೆ ಜನರಲ್ಲಿ ತಿಳುವಳಿಕೆ ಹೆಚ್ಚುತ್ತಿದೆ. ನೋಟಾ (ಮೇಲಿನ ಯಾರೂ ಅಲ್ಲ) ಎಂಬ ಮತದ ಬಗ್ಗೆ ಹಲವಾರು ರೀತಿಯ ಚರ್ಚೆಗಳಿವೆ. ಇದೆಲ್ಲದರ ಹೊರತಾಗಿಯೂ ನೋಟಾ ಈ ಸಲ ಲೋಕ ಸಭಾ ಚುನಾವಣೆಯಲ್ಲಿ ಶೇ. 0.56ರಷ್ಟು ಮತ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದೇಶದಲ್ಲೇ ಮಧ್ಯ ಪ್ರದೇಶದ ಇಂಧೋರ್ ನಲ್ಲಿ ಅತೀ ಹೆಚ್ಚು ಮತಗಳು ಈ ಸಲ ನೋಟಾಕ್ಕೆ ಬಿದ್ದಿದೆ. ನೋಟಾ ಬಿದ್ದ ಅತೀ ದೊಡ್ಡ ಕ್ಷೇತ್ರವಾಗಿ ಇಂಧೋರ್ ಹೊರಹೊಮ್ಮಿದೆ. ಒಟ್ಟು 2,18,674 ನೋಟಾ ಬಿದ್ದಿದೆ. 2019ರ ಚುನಾವಣೆ ಯಲ್ಲಿ ಬಿಹಾರದ ಗೋಪಾಲ್ಗಂಜ್ ಕ್ಷೇತ್ರದ ನೋಟಾ ದಾಖಲೆಯನ್ನು ಇಂದೋರ್ ಮುರಿದಿದೆ ಅನ್ನೋದೇ ವಿಶೇಷ. ಕಳೆದ ಚುನಾವಣೆಯಲ್ಲಿ ಗೋಪಾಲ್ಗಂಜ್ ನಲ್ಲಿ 51,660 ನೋಟಾಗೆ ಮತ ಚಲಾವಣೆಯಾಗಿತ್ತು. ಇಂದೋರ್ ನಲ್ಲಿ ಬಿಜೆಪಿಯ ಶಂಕರ್ ಲಾಲ್ವಾನಿ 12,26,751 ಮತಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದರೆ, ಉಳಿದ 13 ಅಭ್ಯರ್ಥಿಗಳು ನೋಟಾಕ್ಕಿಂತ ಕಡಿಮೆ ಮತ ಪಡೆದಿದ್ದಾರೆ ಅನ್ನೋದು ಗಮನಾರ್ಹ ಸಂಗತಿ.
ರಾಜ್ಯದಲ್ಲಿ ಬಿಜೆಪಿ ಶೇ. 46.06, ಕಾಂಗ್ರೆಸ್ ಶೇ. 45.43, ಜೆಡಿಎಸ್. ಶೇ. 5.6 ಮತಗಳನ್ನು ಪಡೆದುಕೊಂಡಿವೆ. ಬಿಎಸ್ಪಿ (0.33), ಸಿಪಿಐ (0.01) ಗಳಿಸಿದ್ದಕ್ಕಿಂತ ಅಧಿಕ ಮತ ಶೇ. 0.56 ಮತ ನೋಟಾಗೆ ಬಿದ್ದಿದೆ. ಕರ್ನಾಟಕದಲ್ಲಿ ಅತಿಹೆಚ್ಚು ನೋಟಾ ಮತ ಚಲಾವಣೆಯಾದುದು ದ.ಕ. ಜಿಲ್ಲೆಯಲ್ಲಿ. ಅನಂತರದ ಸ್ಥಾನ ಬೆಂಗಳೂರು ಉತ್ತರಕ್ಕೆ. ಉಳಿದಂತೆ 10 ಸಾವಿರಕ್ಕಿಂತ ಹೆಚ್ಚು ನೋಟಾ ಮತ ಬಿದ್ದ ಕ್ಷೇತ್ರಗಳೆಂದರೆ ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಹಾವೇರಿ, ಉಡುಪಿ ಚಿಕ್ಕಮಗಳೂರು, ಉತ್ತರಕನ್ನಡ. ಅತಿ ಕಡಿಮೆ ನೋಟಾ ಮತ ಚಲಾವಣೆಯಾದುದು ಚಿಕ್ಕೋಡಿಯಲ್ಲಾಗಿದೆ.
2019ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಶೇ. 51.38, ಕಾಂಗ್ರೆಸ್ಗೆ ಶೇ. 31.88, ಜೆಡಿಎಸ್ ಗೆ ಶೇ. 9.67, ಬಿಎಸ್ಪಿಗೆ ಶೇ. 1.17 ಮತ ಚಲಾವಣೆಯಾಗಿದೆ. ನೋಟಾ ಪ್ರಭಾವ ಶೇ. 71ರಷ್ಟಿತ್ತು. ಈ ಬಾರಿ ಪ್ರಮಾಣ ಇಳಿಕೆಯಾಗಿದೆ. ಕಳೆದ ಬಾರಿ ಸಿಪಿಐ ಹಾಗೂ ಸಿಪಿಎಂ ತಲಾ ಶೇ. 0.05ರಷ್ಟು ಮತಗಳಿಸಿದ್ದವು. ಕಳೆದ ಬಾರಿ ದ.ಕ.ದಲ್ಲಿ 7,380, ಉಡುಪಿಯಲ್ಲಿ 7,518 ನೋಟಾ ಮತ ಚಲಾವಣೆಯಾಗಿತ್ತು.
ದಕ್ಷಿಣ ಕನ್ನಡ 23,576, ದಾವಣಗೆರೆ 3,176, ಧಾರವಾಡ 6,147, ಗುಲ್ಬರ್ಗ 8,429, ಹಾಸನ 8,541, ಹಾವೇರಿ 10,865, ಕೋಲಾರ 5,831, ಕೊಪ್ಪಳ 3,519, ಮಂಡ್ಯ 7,736, ಬಾಗಲಕೋಟೆ 3,420, ಬೆಂಗಳೂರು ಸೆಂಟ್ರಲ್ 12,126, ಬೆಂಗಳೂರು ಉತ್ತರ 13,554, ಬೆಂ. ಗ್ರಾ. 10,649, ಬೆಂ. ದಕ್ಷಿಣ 7,857, ಚಾಮರಾಜನಗರ 8,143, ಚಿಕ್ಕಬಳ್ಳಾಪುರ 6,596, ಚಿಕ್ಕೋಡಿ 2,608, ಚಿತ್ರದುರ್ಗ 3,190, ಮೈಸೂರು 4,490, ರಾಯಚೂರು 9,850, ಶಿವಮೊಗ್ಗ 4,332, ತುಮಕೂರು 6,460, ಉಡುಪಿ ಚಿಕ್ಕಮಗಳೂರು 11,269, ಉತ್ತರಕನ್ನಡ 10,176, ಬೆಳಗಾವಿ 5,726, ಬಳ್ಳಾರಿ 7,889, ಬೀದರ್ 4,686, ವಿಜಯಪುರ 7,502.
Click 👇