ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಎಕ್ಸ್, ಅಂದರೆ ಈ ಹಿಂದಿನ ಟ್ವಿಟ್ಟರ್ ನಲ್ಲಿ ಅಶ್ಲೀಲ, ಕಾಮ ಪ್ರಚೋದಕ ಮತ್ತು ಹಿಂಸಾತ್ಮಕ ದೃಶ್ಯಗಳಿರುವ ಅಂಶಗಳು ಇನ್ನು ಲಭ್ಯವಾಗಲಿದ್ದು, ಇಂತಹ ಪೋಸ್ಟ್ ಗಳ ಮೇಲಿನ ನಿಯಮಗಳನ್ನು ಎಲನ್ ಮಸ್ಕ್ ಒಡೆತನದ ಎಕ್ಸ್ ಸಡಿಲಗೊಳಿದೆ. ತನ್ನ ಕಂಟೆಂಟ್(ವಿಷಯ) ನೀತಿಯಲ್ಲಿ ಬದಲಾವಣೆ ತಂದಿರುವ ಎಲಾನ್ ಮಸ್ಕ್ ನೇತೃತ್ವದ ಎಕ್ಸ್ ಸಂಸ್ಥೆ, ಅಶ್ಲೀಲ ವಿಚಾರ, ವೀಡಿಯೋಗಳ ಅಪ್ಲೋಡ್ಗೆ ಅನುಮತಿ ನೀಡಿದೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಜನ್ಮ ದಿನಾಂಕ ನೀಡಿ ವಯಸ್ಸು ದೃಢೀಕರಿಸಿದವರಿಗೆ ಮಾತ್ರ ಅಶ್ಲೀಲ, ಕಾಮ ಪ್ರಚೋದಕ ಮತ್ತು ಹಿಂಸೆಯ ಅಂಶಗಳನ್ನು ಒಳಗೊಂಡ ವಿಡಿಯೋಗಳು ಕಾಣಿಸಿಕೊಳ್ಳಲಿವೆ ಎಂದು ಸ್ಪಸ್ಟನೆ ನೀಡಿದೆ. ಕೃತಕ ಬುದ್ಧಿಮತ್ತೆ (ಎ.ಐ.) ಆಧಾರಿತ ಫೋಟೋ, ಇತರ ಕಾಮ ಸದೃಶ ಅಂಶಗಳಿಗೂ ಈ ನಿಯಮ ಅನ್ವಯವಾಗಲಿದೆ.
ಹಾಗೆಂದ ಮಾತ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಅಶ್ಲೀಲ, ಕಾಮ ಪ್ರಚೋದಕ ಕಂಟೆಂಟ್ಗಳನ್ನು ಅಪ್ಲೋಡ್ ಮಾಡುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಇನ್ನು ಹಿಂಸಾತ್ಮಕ ಎಂಬುದಕ್ಕೆ ಸ್ಪಷ್ಟನೆಯಲ್ಲಿ “ಹಿಂಸಾತ್ಮಕ ಅಂಶಗಳಿರುವ ಭಾಷಣ ಮತ್ತು ಹಿಂಸೆಯ ವಿರುದ್ಧ ಹೋರಾಟ ನಡೆಸುವ ಅಂಶಗಳೂ’ ಅದರಲ್ಲಿ ಇರಲಿವೆ ಎಂದು ಹೇಳಿಕೊಳ್ಳಲಾಗಿದೆ. ಟ್ವಿಟ್ಟರ್ ಎಸ್ಕ್ ಆಗಿ ಬದಲಾದ ಬಳಿಕ ಅದರ ಸಂಪಾದನೆ ಮತ್ತು ಅದರ ಬ್ಲು ಟಿಕ್ ಬಳಕೆದಾರರ ಮೇಲೆ ಶುಲ್ಕ ವಿಧಿಸಿದ ಕಾರಣ ಆದಾಯ ಗಣನೀಯ ಇಳಿಕೆ ಕಂಡಿದ್ದು, ಅದಕ್ಕೆ ಪರ್ಯಾಯವಾಗಿ ಹಲವು ಆ್ಯಪ್ ಗಳು ಕಾರ್ಯನಿರ್ವಹಿಸುತ್ತಿವೆ, ಈ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ.
Click 👇