ಪಂಜ: ಇಲ್ಲಿನ ಮುರುಳ್ಯ – ಎಣ್ಮೂರು ಕೃಷಿ ಪತ್ತಿನ ಸಹಕಾರಿ ಸಂಘದಿಂದ 1.52 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವುಗೈದು ಆರೋಪಿಗಳು ಪರಾರಿಯಾಗಿರುವ ಘಟನೆ ನಡೆದಿದೆ.
ಹೊಸ ಕಟ್ಟಡದಲ್ಲಿ ಸಂಘದ ವ್ಯವಹಾರಗಳ ಲೆಕ್ಕ ಇರಿಸಿಕೊಳ್ಳಲು ತಂದಿಟ್ಟಿದ್ದ ವಸ್ತುಗಳು ಕಳವಾಗಿರುವುದರ ಬಗ್ಗೆ ಸಹಕಾರಿ ಸಂಘ ಸುಳ್ಯ ತಾಲೂಕು ನಿಯಮಿತ ಅಲೆಕ್ಕಾಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್ ದೂರು ನೀಡಿದ್ದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮಾ.30 ಪ್ರಕರಣ ದಾಖಲಾಗಿದೆ. ಮಾನಿಟರ್-2, ಕಂಪ್ಯೂಟರ್-1 ಸೇರಿದಂತೆ LED ಸ್ಮಾರ್ಟ್ ಟಿವಿಗಳು ಸೇರಿದಂತೆ 1.52 ಲಕ್ಷ ರೂಪಾಯಿ ಮೌಲ್ಯದ ವಸ್ತುವನ್ನು ಕಳವಾಗಿದೆ ಎಂದು ಹೇಳಲಾಗಿದೆ.