ನ್ಯೂಸ್ ನಾಟೌಟ್: ಕೂತಲ್ಲೇ ಆಹಾರ ತರಿಸಿಕೊಂಡು ತಿನ್ನುವ ಕಾಲದಲ್ಲಿ ಸ್ವಿಗ್ಗಿ, ಜೊಮ್ಯಾಟೋ ದಂತಹ ದೈತ್ಯ ಕಂಪನಿಗಳು ಅದನ್ನೇ ಬಂಡವಾಳ ಮಾಡಿಕೊಂಡಿವೆ. ಇದೀಗ ಜೊಮ್ಯಾಟೋ ಸಂಸ್ಥೆ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಫುಡ್ ಡೆಲಿವೆರಿ ಆ್ಯಪ್ ಜೊಮ್ಯಾಟೊ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ “ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ, ಅಗತ್ಯವಿದ್ದರೆ ಮಾತ್ರ ಮಧ್ಯಾಹ್ನದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡಿ, ಇಲ್ಲದಿದ್ದರೆ ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ತೀವ್ರವಾದ ಶಾಖದ ಅಲೆ, ಕೆಲವೊಮ್ಮೆ ಗಾಳಿ ಮಳೆಗೆ ಆರ್ಡರ್ ಹೆಚ್ಚಾದಂತೆ ಡೆಲಿವರಿ ಬಾಯ್ಸ್ಗಳ ಕಾಳಜಿಯ ಮೇರೆಗೆ ಜೊಮ್ಯಾಟೊ ತನ್ನ ಗ್ರಾಹಕರನ್ನು ಈ ರೀತಿ ಒತ್ತಾಯಿಸಿದೆ ಎಂದು ಹೇಳಲಾಗಿದೆ. ಆದರೆ ಹಲವರು ಇದಕ್ಕೆ ಟೀಕೆ ಮಾಡಿದ್ದು, ಕೆಲವರು ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.
Click 👇