ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆ ಫಲಿತಾಂಶ ಚುನಾವಣಾ ಮತ ಎಣಿಕೆ ಮಧ್ಯೆ ಬಿಜೆಪಿ ಕಚೇರಿಯೊಳಗೆ ಸಿಹಿ ತಿಂಡಿ ತಯಾರಿ ಮಾಡಲಾಗುತ್ತಿದೆ. ಇತ್ತ ಛತ್ತೀಸ್ಗಢದ ಬಿಜೆಪಿ ಕಚೇರಿಯಲ್ಲೂ ವಿಶೇಷ ಸಿದ್ಧತೆ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ವಿಜಯೋತ್ಸವ ಆಚರಿಸಲು ರಾಯಪುರ ಬಿಜೆಪಿ 11 ಬಗೆಯ 201 ಕೆಜಿ ಲಡ್ಡುಗಳನ್ನು ವಿತರಿಸಲಿದೆ ಎಂದು ಬಿಜೆಪಿ ಮಾಹಿತಿ ನೀಡಿದೆ.
ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಜೆಪಿಯ ಆತ್ಮಸ್ಥೈರ್ಯವನ್ನು ಹೆಚ್ಚಿಸಿವೆ ಎನ್ನಲಾಗಿದೆ. ಹೀಗಾಗಿ ಇಂದಿನ ಫಲಿತಾಂಶ ಭಾರೀ ಕುತೂಹಲ ಮೂಡಿದೆ. ಇದರಿಂದಾಗಿ ಮತ ಎಣಿಕೆಗೂ ಮುನ್ನವೇ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಾಯಕರು ಜಮಾಯಿಸಲಾರಂಭಿಸಿದ್ದಾರೆ. 2011 ರ ಜನಗಣತಿಯ ಪ್ರಕಾರ, ಇಲ್ಲಿನ ಜನಸಂಖ್ಯೆಯು ಸುಮಾರು 2.55 ಕೋಟಿ ಆಗಿದೆ.
ಈ ರಾಜ್ಯವು ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಒಡಿಶಾ ಮತ್ತು ಉತ್ತರ ಪ್ರದೇಶ 7 ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ರಾಯ್ಪುರ್ ಅದರ ರಾಜಧಾನಿಯಾಗಿದೆ, ಇದನ್ನು ವಿಶೇಷವಾಗಿ ವ್ಯಾಪಾರ, ಆರ್ಥಿಕತೆ ಮತ್ತು ಆಡಳಿತದ ಕೇಂದ್ರವೆಂದು ಪರಿಗಣಿಸಲಾಗಿದೆ.
Click 👇