ನ್ಯೂಸ್ ನಾಟೌಟ್: ಬೆಂಗಳೂರಿನ ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದ್ದ ಕೇಂದ್ರದಲ್ಲಿ ಗಲಾಟೆ ನಡೆದಿದ್ದು, ಟಿ ಶರ್ಟ್ ಹಾಕಿಕೊಂಡು ಬಂದು ಕೆಆರ್ಎಸ್ ಪಾರ್ಟಿಯ ಅಭ್ಯರ್ಥಿ ರಘುಪತಿ ಭಟ್ ಎಂಬುವವರು ಪೊಲೀಸರ ವಿರುದ್ಧ ಕೂಗಾಡಿ ಆಕ್ರೋಶ ಹೊರಹಾಕಿದ್ದಾರೆ.
ಸೆಕ್ಯೂರಿಟಿ ಚೆಕ್ ಎಲ್ಲವೂ ಆದ ಬಳಿಕ ಒಳಗೆ ಬಂದಾಗ ಟಿ ಶರ್ಟ್ ಧರಿಸಿ ಮತ ಎಣಿಕೆ ಕೇಂದ್ರಕ್ಕೆ ಬರಬಾರದು ಎಂದು ಪೊಲೀಸರು ಹೊರಗೆ ಕಳಿಸಿದ್ದಾರೆ. ಇದರಿಂದ ಸಿಟ್ಟಾದ ರಘುಪತಿ ಭಟ್ ಎಂಬವರು ಅನುಮತಿ ಇದೆ ಎಂದು ಹೇಳಿದ್ದಕ್ಕೆ ಟಿ ಶರ್ಟ್ ಧರಿಸಿದ್ದು, ಇಲ್ಲಿಗೆ ಬಂದ್ಮೇಲೆ ಪೊಲೀಸರು ಹೊರಗೆ ಕಳಿಸಿ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಟಿ ಶರ್ಟ್ ಧರಿಸಿ ಬರಬಾರದು ಎಂಬ ಯಾವ ರೂಲ್ಸ್ ಇಲ್ಲ. ಹೀಗಿದ್ದರೂ ಪೊಲೀಸರು ಸುಖಾಸುಮ್ಮನೆ ಕಿರಿಕಿರಿ ಮಾಡುತ್ತಿದ್ದಾರೆ. ನನ್ನ ಎಳೆದುಕೊಂಡು, ದೂಡಿಕೊಂಡು ಹೊರಗೆ ಕಳಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಅಂದಹಾಗೆ ಮತ ಎಣಿಕೆ ಕೇಂದ್ರದ ಕೊಠಡಿಯೊಳಗೆ ಮೊಬೈಲ್ ಫೋನ್, ಸ್ಮಾಟ್ ವಾಚ್, ಬ್ಲ್ಯೂಟೂತ್ ಡಿವೈಸ್, ನೀರಿನ ಬಾಟೆಲ್, ತಿಂಡಿ ಹಾಗೂ ತಂಪು ಪಾನೀಯಯನ್ನು ತರುವಂತಿಲ್ಲ. ಇನ್ನೂ ಗುಟ್ಕಾ, ಪಾನ್ ಮಸಾಲ, ಧೂಮಪಾನವೂ ನಿಷೇಧವಿದೆ. ಮ್ಯಾಚ್ ಬಾಕ್ಸ್, ಲೈಟರ್, ಪಟಾಕಿಯನ್ನು ತರುವಂತಿಲ್ಲ ಎಂಬ ನಿಯಮವಿದೆ.
Click 👇