ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕ ಸಭಾ ಚುನಾವಣಾ ಕಣದ ಫಲಿತಾಂಶ ಬಿರುಸುಗೊಂಡಿದೆ.
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿಕೊಂಡಿದ್ದಾರೆ. ಆದರೆ ಬಿಜೆಪಿಯ ಭಾರಿ ದೊಡ್ಡ ಗೆಲುವಿನ ಆಸೆಗೆ ನೋಟಾ ತಣ್ಣೀರು ಎರಚುವ ಸಾಧ್ಯತೆ ಇದೆ. ಎರಡನೇ ಸುತ್ತಿನ ಮತ ಎಣಿಕೆಯ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 3,200ಕ್ಕೂ ಹೆಚ್ಚು ಮತಗಳು ನೋಟಾಗೆ ಬಿದ್ದಿವೆ ಎಂದು ತಿಳಿದು ಬಂದಿದೆ.
ಸೌಜನ್ಯ ನ್ಯಾಯ ಪರ ಹೋರಾಟಗಾರರು ನ್ಯಾಯಕ್ಕಾಗಿ ನೋಟಾಕ್ಕೆ ಮತ ನೀಡಿ ಎಂದು ಹೇಳಿದ್ದನ್ನು ಸ್ಮರಿಸಬಹುದು.