ನ್ಯೂಸ್ ನಾಟೌಟ್: ಬಿಜೆಪಿ ಪ್ರಾಬಲ್ಯ ಇರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳು ಮಿಂಚಿನ ಓಟವನ್ನು ಆರಂಭಿಸಿವೆ. ಮೊದಲ ಸುತ್ತಿನ ಮತದಾನದ ಮುಕ್ತಾಯದ ವೇಳೆಗೆ ಬಿಜೆಪಿ ನೇತೃತ್ವದ ಎನ್ ಡಿಎ 293 , ಕಾಂಗ್ರೆಸ್ ನೇತೃತ್ವದ ಐಎನ್ ಡಿಐಎ 214 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿವೆ.
ಸಹಜವಾಗಿಯೇ ಇದು ಕುತೂಹಲ ಕೆರಳಿಸಿದೆ. ಸಿಎಂ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದರು. ತಮ್ಮ ರಾಜ್ಯದಲ್ಲಿ ಪ್ರಧಾನಿ ಮೋದಿಗೆ ಭಾರಿ ದೊಡ್ಡ ಮುನ್ನಡೆ ತಂದುಕೊಡುವ ನಿರೀಕ್ಷೆ ಇತ್ತು. ಆದರೆ ಆ ಎಲ್ಲ ನಿರೀಕ್ಷೆಗಳು ಇದೀಗ ತಲೆ ಕೆಳಗಾಗುವ ಸಾಧ್ಯತೆ ಕಂಡು ಬರುತ್ತಿದೆ. ಎಸ್ ಪಿ 30, ಕಾಂಗ್ರೆಸ್ 6, ರಾಷ್ಟ್ರೀಯ ಲೋಕ ದಳ 2 ಸ್ಥಾನವನ್ನು ಪಡೆದುಕೊಂಡಿದೆ.
Click 👇