ನ್ಯೂಸ್ ನಾಟೌಟ್: ಇಂದು(ಜೂನ್.5) ದೇಶದ 543 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು, 543 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 8,360 ಅಭ್ಯರ್ಥಿಗಳ ಭವಿಷ್ಯ ಪ್ರಕಟವಾಗಲಿದೆ. ಈಗಾಗಲೇ ಮತ ಪೆಟ್ಟಿಗೆಗಳಿರುವ ಸ್ಟ್ರಾಂಗ್ ರೂಮ್ ಬಾಗಿಲು ತೆಗೆಯಲಾಗಿದೆ. ೭ ಗಂಟೆಯಿಂದ ಮತ ಎಣಿಕೆ ಆರಂಭವಾಗುತ್ತಿದೆ. 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತದಲ್ಲಿ ಮತದಾನ ನಡೆದಿತ್ತು. ಏ.19ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಮತದಾನ.
ಏಪ್ರಿಲ್ 26ರಂದು 2ನೇ ಹಂತದಲ್ಲಿ 89 ಕ್ಷೇತ್ರಗಳಲ್ಲಿ ಮತದಾನ. ಮೇ 7ರಂದು 3ನೇ ಹಂತದಲ್ಲಿ 94 ಕ್ಷೇತ್ರಗಳಲ್ಲಿ ಮತದಾನ. ಮೇ 13ರಂದು 4ನೇ ಹಂತದಲ್ಲಿ 96 ಕ್ಷೇತ್ರಗಳಲ್ಲಿ ಮತದಾನ. ಮೇ 20ರಂದು 5ನೇ ಹಂತದಲ್ಲಿ 49 ಕ್ಷೇತ್ರಗಳಲ್ಲಿ ಮತದಾನ. ಮೇ 25ರಂದು 6ನೇ ಹಂತದಲ್ಲಿ 56 ಕ್ಷೇತ್ರಗಳಲ್ಲಿ ಮತದಾನ. ಜೂನ್ 1ರಂದು ಅಂತಿಮ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಮತದಾನ. ರಾಜ್ಯದ 28 ಕ್ಷೇತ್ರಗಳಿಗೆ ಏ. 26, ಮೇ 7ರಂದು ಮತದಾನ ನಡೆದಿತ್ತು. ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 474 ಅಭ್ಯರ್ಥಿಗಳ ಭವಿಷ್ಯ ಪ್ರಕಟವಾಗಲಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಶೇಕಡಾ 70.64ರಷ್ಟು ಮತದಾನವಾಗಿತ್ತು ಎಂದು ವರದಿ ತಿಳಿಸಿದೆ.