ನ್ಯೂಸ್ ನಾಟೌಟ್: ಕೊಡಗನ್ನು ದಕ್ಷಿಣದ ಕಾಶ್ಮೀರ ಎಂದೇ ಕರೆಯುತ್ತಾರೆ. ಮಳೆಗಾಲವಂತು ಕೊಡಗಿನ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸೋದು ಕಷ್ಟ. ಅಷ್ಟೊಂದು ಸುಂದರವಾಗಿ ಹಚ್ಚ ಹಸುರಾಗಿ ಕೊಡಗು ಶೃಂಗಾರಗೊಂಡಿರುತ್ತದೆ. ಈಗ ಮಳೆಗಾಲ, ಕೊಡಗಿನ ಜಲಪಾತಗಳು ಕೈ ಬೀಸಿ ಪ್ರವಾಸಿಗರನ್ನು ಕರೆಯುತ್ತಿವೆ. ಪ್ರವಾಸೋದ್ಯಮಕ್ಕೆ ಇದೀಗ ಕೊಡಗಿನಲ್ಲಿ ಮರು ಜೀವವೇ ಬಂದಿದೆ.
ಈ ಹಿಂದೆ ಪ್ರಾಕೃತಿಕ ವಿಕೋಪ, ಭೂಕಂಪದಂತಹ ವಿಚಾರಗಳಿಂದ ಕೊಡಗಿಗೆ ಬರುವುದಕ್ಕೆ ಜನರು ಹಿಂದೇಟು ಹಾಕಿದ್ದರು. ಆದರೆ ಈಗ ಜನರು ಮತ್ತೆ ಕೊಡಗಿನಾಚೆ ತಮ್ಮ ದೃಷ್ಟಿಯನ್ನು ಹರಿಸಿದ್ದಾರೆ. 2023ರಲ್ಲಿ ಕೊಡಗು ಪ್ರವಾಸೋದ್ಯಮ ಇನ್ನಿಲ್ಲದಂತೆ ಚೇತರಿಸಿಕೊಂಡಿತ್ತು.
2023ರ ಜನವರಿಯಿಂದ ಡಿಸೆಂಬರ್ ವರೆಗೆ ಜಿಲ್ಲೆಗೆ ಭರ್ತಿ 43 ಲಕ್ಷ ರೂ. ಮಂದಿ ಪ್ರವಾಸಿಗರು ಆಗಮಿಸಿದ್ದಾರೆ. 2024ರಲ್ಲಿ ಮಾತ್ರ ಪ್ರವಾಸೋದ್ಯಮಿಗಳ ಪಾಲಿಗೆ ನೀರಸವಾಗಿತ್ತು. ಈ ವರ್ಷದ ಮೊದಲ ಐದು ತಿಂಗಳು ಜಿಲ್ಲೆಯತ್ತ ಪ್ರವಾಸಿಗರು ಮುಖ ಮಾಡಿರುವುದು ಬಹಳ ಕಡಿಮೆ.
ಕೊಡಗಿನ ರಾಜಾಸೀಟ್, ಅಬ್ಬಿಫಾಲ್ಸ್ ಮಾಂದಲಪಟ್ಟಿ, ತಲಕಾವೇರಿ ಭಾಗಮಂಡಲ, ಇಗ್ಗುತ್ತಪ್ಪ ದೇವಸ್ಥಾನ, ಮಲ್ಲಳ್ಳಿ ಜಲಪಾತ, ನಾಗರಹೊಳೆ ಸಫಾರಿ, ಇರ್ಪು ಜಲಪಾತ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳಿಗೆ ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಇಲ್ಲಿನ ದಟ್ಟವಾದ ಮಂಜು ಪ್ರವಾಸಿಗರ ಸಂಭ್ರಮ ಹೆಚ್ಚಿಸುತ್ತಿದೆ. ಇನ್ನು ಜೂನ್ ಮೊದಲ ವಾರದಲ್ಲಿ ಮಳೆ ಅಬ್ಬರ ಜೋರಾಗಲಿದೆ. ಜಲಪಾತಗಳು ಧುಮ್ಮಿಕ್ಕಲಾರಂಭಿಸುತ್ತವೆ. ಆಗ ಪ್ರವಾಸಿಗರಿಗೆ ಇನ್ನಷ್ಟು ರೋಚಕ ಅನುಭವ ಸಿಗಲಿದೆ.
ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ ಅನ್ನುವುದರ ಬಗ್ಗೆ ಇತ್ತೀಚೆಗೆ ಟೀಕೆ ಕೇಳಿ ಬಂದಿತ್ತು. ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ಪ್ರವಾಸಿ ಮಿತ್ರರ ಕೊರತೆಯೂ ಇದೆ. ಶೌಚಾಲಯದ ನಿರ್ಮಾಣ ಕೂಡ ಅಗತ್ಯವಾಗಿದೆ. ಅಲ್ಲದೆ ರಸ್ತೆಯ ಅಭಿವೃದ್ಧಿಯಾಗಬೇಕಿದೆ.