ನ್ಯೂಸ್ ನಾಟೌಟ್: 25 ವರ್ಷದ ಮಹಿಳೆಯ ಹೊಟ್ಟೆಯಿಂದ ಎರಡೂವರೆ ಕೆಜಿಗೂ ಹೆಚ್ಚು ಕೂದಲನ್ನು ವೈದ್ಯರು ಸರ್ಜರಿ ಮಾಡಿ ಹೊರತೆಗೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆಯ ಹೊಟ್ಟೆಯೊಳಗಿದ್ದ ಕೂದಲಿನ ಪ್ರಮಾಣವನ್ನು ನೋಡಿ ಸ್ವತಃ ವೈದ್ಯರೇ ಶಾಕ್ ಆಗಿದ್ದರು ಎನ್ನಲಾಗಿದೆ. ಮಹಿಳೆ ಕೂದಲನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಳು, ಅದು ಅವಳಿಗೆ ತೀವ್ರವಾದ ಹೊಟ್ಟೆನೋವನ್ನು ಉಂಟಾಗಿತ್ತು ಎನ್ನಲಾಗಿದೆ.
ಹಲವು ಪರೀಕ್ಷೆಗಳ ನಂತರ ಆಕೆಯ ಹೊಟ್ಟೆಯಲ್ಲಿ ಕೂದಲಿನ ಉಂಡೆಯಿರೋದು ತಿಳಿದುಬಂತು. ಚಿತ್ರಕೂಟದ ಕುಂದ್ ಸದ್ಗುರು ಆಸ್ಪತ್ರೆಯ ಹಿರಿಯ ವೈದ್ಯ ಡಾ.ನಿರ್ಮಲಾ ಗೆಹಾನಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ 2.5 ಕೆಜಿ ಕೂದಲನ್ನು ಹೊರತೆಗೆದಿದ್ದಾರೆ. ಇಂತಹ ರೋಗವನ್ನು ಟ್ರೈಕೊಬೆಜೋರ್ ಎಂದು ಕರೆಯಲಾಗುತ್ತದೆ. ಅಂತಹ ರೋಗಿಗಳಿಗೆ ಕೆಲವು ಮಾನಸಿಕ ಸಮಸ್ಯೆಗಳಿರುತ್ತವೆ, ಈ ರೋಗವು ಶೇಕಡಾ ಒಂದರಷ್ಟು ಜನರಲ್ಲಿ ಕಂಡುಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.. ಮಹಿಳೆ ತನ್ನ ಕೂದಲನ್ನು ಕಿತ್ತು ತಿನ್ನುತ್ತಿದ್ದಳು. ಮಾತ್ರವಲ್ಲ ಇತರರ ಕೂದಲನ್ನು ಸಹ ಕಿತ್ತು ತೆಗೆದು ತಿನ್ನುತ್ತಿದ್ದಳು ಎಂದು ತಿಳಿದುಬಂದಿದೆ.
Click 👇