ನ್ಯೂಸ್ ನಾಟೌಟ್: ಪುರಿ ಭಗವಾನ್ ಜಗನ್ನಾಥ ದೇವಸ್ಥಾನದ ಉತ್ಸವದ ವೇಳೆ ಪಟಾಕಿಗಳು ಆಕಸ್ಮಿಕವಾಗಿ ಸ್ಫೋಟಗೊಂಡು ಹಲವಾರು ಭಕ್ತರು ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ(ಮೇ.29) ನಡೆದಿದೆ.
ಗಾಯಗೊಂಡಿರುವ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ. ಘಟನೆಯ ಬಗ್ಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಒಡಿಶಾದ ಪುರಿಯಲ್ಲಿ ಬುಧವಾರ ರಾತ್ರಿ ಭಗವಾನ್ ಜಗನ್ನಾಥನ ಚಂದನ್ ಜಾತ್ರಾ ಉತ್ಸವದ ನಡೆಯುತ್ತಿದ್ದ ವೇಳೆ ಭಕ್ತ ಸಮೂಹ ಪಟಾಕಿ ಸಿಡಿಸಿ ಹಬ್ಬ ಆಚರಿಸುತ್ತಿದ್ದರು ಈ ವೇಳೆಬೆಂಕಿಯ ಕಿಡಿ ಪಟಾಕಿಯ ರಾಶಿಗೆ ಬಿದ್ದು ಪಟಾಕಿಗಳು ಸ್ಪೋಟಗೊಂಡ ಪರಿಣಾಮ ಸುಮಾರು ಹದಿನೈದು ಭಕ್ತರು ಗಾಯಗೊಂಡಿದ್ದಾರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Click 👇