ನ್ಯೂಸ್ ನಾಟೌಟ್: ಕಷ್ಟದಲ್ಲಿರುವ ಮಹಿಳೆಗೆ ಮನೆ ನಿರ್ಮಿಸಿಕೊಟ್ಟು ‘ಸೇವಾ ಭಾರತಿ’ ಮಾನವೀಯತೆ ಮೆರೆದಿದೆ. ಆಕೆಯ ಜೀವನದಲ್ಲಿ ಬೆಳಕಾಗಿದೆ. ಈ ಮನೆಯ ಹಸ್ತಾಂತರ ಬುಧವಾರ (ಮೇ29) ಸುಳ್ಯ ಸಮೀಪದ ಜಾಲ್ಸೂರಿನಲ್ಲಿ ನಡೆಯಿತು.
ಮಹಿಳೆ ಹೆಸರು ಕುಂದ್ರಕೋಡಿ ಲಕ್ಷ್ಮೀ. ಇವರಿಗೆ ಮನೆಯಿರಲಿಲ್ಲ. ಮಳೆಗಾಲದಲ್ಲಿ ವಾಸ ಮಾಡುವ ಸ್ಥಿತಿಯಲ್ಲಿ ವಾಸವಿದ್ದ ಮನೆ ಇರಲಿಲ್ಲ. ಹೀಗಾಗಿ ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ (ರಿ) ಸುಳ್ಯ ನೇತೃತ್ವದಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಮತ್ತು ದಾನಿಗಳ ಸಹಕಾರ ಪಡೆದುಕೊಂಡು ಸುಂದರವಾದ ಮನೆಯನ್ನು ನಿರ್ಮಿಸಿಕೊಡಲಾಗಿದೆ. ಸೇವಾ ಭಾರತಿ ಸಮಾಜದಲ್ಲಿರುವ ಕಡು ಬಡವರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯಿಂದ ಇಂತಹ ಕೆಲಸ ನಡೆಸಿಕೊಂಡು ಬರಲಾಗುತ್ತಿದೆ.
ಶಾಸಕಿ ಭಾಗೀರಥಿ ಮುರುಳ್ಯ, ಸೇವಾ ಭಾರತೀ ಹೆಲ್ಪ್ ಲೈನ್ ಟ್ರಸ್ಟ್ ಅಧ್ಯಕ್ಷ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಎಸ್ ಆರ್ ಕೆ ಸಂಸ್ಥೆ ಮಾಲೀಕ ಉದ್ಯಮಿ ಕೇಶವ ಅಮೈ, ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತಿರುಮಲೇಶ್ವರಿ, ಆರ್ ಎಸ್ ಎಸ್ ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು, ಲತೀಶ್ ಗುಂಡ್ಯ, ಸೇವಾ ಭಾರತಿ ಉಪಾಧ್ಯಕ್ಷ ಆರ್. ಕೆ. ಭಟ್ , ದೇವಿ ಪ್ರಸಾದ್ ಅರಂಬೂರು ಮತ್ತಿತರರು ಹಾಜರಿದ್ದರು.