ನ್ಯೂಸ್ ನಾಟೌಟ್: ಗೆಳತಿಯ ಜೊತೆ ಬ್ರೇಕಪ್ ಆದ ಬಳಿಕ ಸಿಎ ಆಗಿರುವ ಆಕೆಯ ಬಾಯ್ ಫ್ರೆಂಡ್ ತನ್ನ ಮಾಜಿ ಗೆಳತಿಗೆ ಖರ್ಚಿನ ಸಂಪೂರ್ಣ ಪಟ್ಟಿಯನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಒಟ್ಟು 7 ತಿಂಗಳು ಅವರು ಒಟ್ಟಿಗೆ ಇದ್ದರು ಎನ್ನಲಾಗಿದೆ. ಆತ ಆಕೆಗಾಗಿ ಖರ್ಚು ಮಾಡಿದ ಪ್ರತಿಯೊಂದು ದುಡ್ಡನ್ನು ಕೂಡ ಲೆಕ್ಕ ಹಾಕಿ ಆಕೆಗೆ ಸಂಪೂರ್ಣ ಬಿಲ್ ಕಳುಹಿಸಿದ್ದಾನೆ. ಎಕ್ಸೆಲ್ ಶೀಟ್ ಸಿದ್ಧಪಡಿಸಿ ಅದರಲ್ಲಿ ಪ್ರತೀ ತಿಂಗಳು ಆದ ಖರ್ಚು ಅಂದರೆ ಕಾಫಿಯಿಂದ , ಡಿನ್ನರ್ ಡೇಟ್, ನೈಟ್ ಪಾರ್ಟಿ,ವ್ಯಾಲೆಂಟೈನ್ ಡೇ ಗಿಫ್ಟ್ ತನಕ ಖರ್ಚಾದ ದುಡ್ಡನ್ನು ಮರು ಪಾವತಿಸುವಂತೆ ಹೇಳಿದ್ದ ಬಗ್ಗೆ ಬಿಲ್ ನಲ್ಲಿ ಉಲ್ಲೇಖಿಸಲಾಗಿದೆ.
ಈಕೆಯಿಂದ ಆದ ವೆಚ್ಚಕ್ಕೆ 18 ಪರ್ಸೆಂಟ್ ಜಿಎಸ್ಟಿ ಕೂಡ ಸೇರಿಸಿ ಬಿಲ್ನ ಎಕ್ಸೆಲ್ ಶೀಟ್ ಕಳುಹಿಸಿದ್ದು ವಿಶೇಷವಾಗಿತ್ತು. ಇದೀಗ ಒಟ್ಟು ಖರ್ಚಾದ ಹಣದ ಬಿಲ್ನ ಎಕ್ಸೆಲ್ ಶೀಟ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. @trolls_official ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ.
Click 👇