ನ್ಯೂಸ್ ನಾಟೌಟ್: ಮಕ್ಕಳನ್ನು ನಾವು ದೇವರಿಗೆ ಹೋಲಿಸುತ್ತೇವೆ. ಅಂತಹ ದೇವ ಮಕ್ಕಳಿಗೆ ಎರಡಕ್ಷರ ಕಲಿಸುವುದೆಂದ್ರೆ ಪುಣ್ಯದ ಕೆಲಸ. ನಿಮ್ಮಲ್ಲಿ ಎಷ್ಟೋ ಜನರಿಗೆ ಪುಟ್ಟ ಮಕ್ಕಳಿಗೆ ಪಾಠ ಮಾಡಬೇಕು ಅನ್ನುವ ಕನಸಿರುತ್ತದೆ. ಆದರೆ ಆ ಕನಸನ್ನು ಈಡೇರಿಸಿಕೊಳ್ಳುವುದು ಹೇಗೆ ಎಂಬ ಮಾರ್ಗವನ್ನು ಹುಡುಕುತ್ತಿದ್ದೀರಾ..? ಹಾಗಾದರೆ ತಡ ಏಕೆ..? ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿಶಿಕ್ಷಕಿಯರ ತರಬೇತಿ ಸಂಸ್ಥೆಗೆ ಇಂದೇ ಜಾಯಿನ್ ಆಗಿ. ಶಿಕ್ಷಕಿಯಾಗುವ ನಿಮ್ಮಕನಸನ್ನು ಇಂದೇ ಈಡೇರಿಸಿಕೊಳ್ಳಿ. ಉತ್ಕೃಷ್ಟ ಗುಣಮಟ್ಟದ ತರಬೇತಿಯನ್ನು ಇಲ್ಲಿನ ವಿದ್ಯಾ ಸಂಸ್ಥೆ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದೆ . ಈ ಸಂಸ್ಥೆ ಉಳಿದೆಲ್ಲ ಸಂಸ್ಥೆಗಿಂತ ವಿಭಿನ್ನವಾಗಿ ಶಿಕ್ಷಕಿಯರ ತರಬೇತಿ ನೀಡುತ್ತಿರುವುದು ವಿಶೇಷ.
ಕೇಂದ್ರ ಸರ್ಕಾರದ ನಿರುದ್ಯೋಗ ನಿರ್ಮೂಲನ ಏಜೆನ್ಸಿಯಾದ ಭಾರತ್ ಸೇವಕ್ ಸಮಾಜದ ವತಿಯಿಂದ ಈ ತರಬೇತಿಯನ್ನು ನಡೆಸಲಾಗುತ್ತಿದೆ. ಸಂಸ್ಥೆಯ ಮೂಲಕ ತರಬೇತಿ ಪಡೆದ ತರಬೇತಿ ಶಿಕ್ಷಕಿಯರು ಒಂದು ವರ್ಷದಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳು ,ದಾಖಲೆಗಳು,ಪ್ರಾಜೆಕ್ಟ್ ಗಳು ಸೇರಿದಂತೆ ಮಗುವಿಗೆ ಕಲಿಸಲು ಸಹಕಾರಿಯಾದ ಅಧ್ಯಯನ ಪರಿಕರಗಳನ್ನು ತಾವೇ ತಯಾರಿಸಿ ಪ್ರದರ್ಶನದ ಮೂಲಕ ವಿವರಿಸುವುದು ತರಬೇತಿಯ ವಿಶೇಷತೆಯಾಗಿದೆ.
ನಲಿಕಲಿ ಮಾದರಿಯಲ್ಲಿ ಮಕ್ಕಳಿಗೆ ಕಥೆ ಹೇಳಿ ಕೂಡುವುದು,ಪದ್ಯಗಳನ್ನು ರಚಿಸಿ ಹಾಡುವುದನ್ನು ಇಲ್ಲಿ ಕಲಿಸಲಾಗುತ್ತದೆ , ಪ್ರತಿ ವರ್ಷವು ಇಲ್ಲಿಯ ತರಬೇತಿ ಶಿಕ್ಷಕಿಯರು ಪ್ರದರ್ಶಿಸುವ ಪಾರಂಪರಿಕ ವಸ್ತುಗಳು ಗಮನ ಸೆಳೆಯುತ್ತದೆ.
ಪರಿಸರವನ್ನು ಗುರುತ್ತಿಸಿ ವಿವಿಧ ಸಸ್ಯಗಳ ಬೇರು,ಬೀಜ,ವಿವಿಧ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಗುರುತಿಸುವುದನ್ನು ಕಲಿಯುತ್ತಾರೆ. ಅಲಂಕಾರಿಕ ವಸ್ತುಗಳ ತಯಾರಿ, ಪೇಪರ್ ಕ್ರಾಫ್ಟ್,ಚಿತ್ರಕಲೆ,ಕಸದಿಂದ ರಸ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಗಳನ್ನು ,ವಿಶೇಷ ಕಾರ್ಯಗಾರ,ವಿಚಾರಗೋಷ್ಟಿಗಳನ್ನು ನಡೆಸಲಾಗುತ್ತಿದೆ. ತರಬೇತಿ ಜೊತೆಯಲ್ಲಿ ಉಚಿತ ಇಂಗ್ಲೀಷ್ ಸಂವಹನ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ.
ಒಟ್ಟಿನಲ್ಲಿ ಮಗುವಿಗೆ ಎಲ್ಲಾ ಅಂಶಗಳನ್ನು ಪೂರ್ವ ಪ್ರಾಥಮಿಕ ಹಂತದಲ್ಲಿ ಬೆಳೆಸಲು ಸಹಾಕರಿಯಾಗಬಲ್ಲ ಶಿಕ್ಷಣವನ್ನು ಹೇಗೆ ನೀಡಬಹುದು ಎಂಬುದನ್ನು ಕಲಿಸಿಕೂಡುವ ಮೂಲಕ ಉತ್ತಮ ಶಿಕ್ಷಕಿಯರನ್ನು ಸಂಸ್ಥೆ ರೂಪಿಸುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವತಿಯರಿಗೆ ಈ ತರಬೇತಿ ಪಡೆದು ಶಿಕ್ಷಕಿಯಾಗಿ ಅಥವಾ ಸ್ವತಃ ನರ್ಸರಿ ಶಾಲೆಗಳನ್ನು ತೆರೆದು ಭವಿಷ್ಯ ರೂಪಿಸಲು ಈ ತರಬೇತಿ ಸಹಕರಿಯಾಗಿದೆ.
ಒಂದು ವರ್ಷದ ತರಬೇತಿಗೆ ಸೇರಲಿಚ್ಚಿಸುವವರು ಬೆಳ್ಳಾರೆಯ ದೇವಿ ಹೈಟ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಞಾನದೀಪ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 98457 13297
Click 👇