ನ್ಯೂಸ್ ನಾಟೌಟ್: ಹಾವು ಕಚ್ಚಿದ್ದರೂ ಮುಳ್ಳು ಚುಚ್ಚಿದೆ ಎಂದು ಹೇಳಿ ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಬೆಳಗಾಗುತ್ತಲೇ ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕರಕುಚ್ಚಿ ಗ್ರಾಮದ ಗಂಗಪ್ಪ (48) ಮೃತರು ಎಂದು ತಿಳಿದುಬಂದಿದೆ. ಗಂಗಪ್ಪ ಗದ್ದೆಗೆ ಕೆಲಸಕ್ಕೆ ಹೋಗಿದ್ದ ವೇಳೆ ಹಾವು ಕಡಿದಿದೆ ಆದರೆ ಇದರ ಅರಿವಾಗದ ಗಂಗಪ್ಪ ಮನೆಗೆ ಬಂದಿದ್ದಾರೆ ಈ ವೇಳೆ ಗಂಗಪ್ಪ ಅವರ ಕಾಲಿನಲ್ಲಿ ಗಾಯದ ಕಲೆಗಳನ್ನು ಕಂಡು ಮನೆಮಂದಿ ಕೇಳಿದಾಗ ಮುಳ್ಳು ಚುಚ್ಚಿ ಗಾಯವಾಗಿರಬೇಕು ಎಂದು ಹೇಳಿ ಊಟ ಮಾಡಿ ಮಲಗಿದ್ದಾರೆ, ಆದರೆ ಬೆಳಿಗ್ಗೆ ಮನೆಮಂದಿ ಎದ್ದು ಗಂಗಪ್ಪ ಅವರನ್ನು ಎಬ್ಬಿಸಿದರೆ ಏಳಲೇ ಇಲ್ಲ ಬಳಿಕ ಪರಿಶೀಲಿಸಿದಾಗ ಗಂಗಪ್ಪ ಅವರ ಕಾಲಿಗೆ ಮುಳ್ಳಿನ ಗಾಯವಾಗಿರುವುದಲ್ಲ ಬದಲಿಗೆ ಕಾವು ಕಚ್ಚಿ ಗಾಯವಾಗಿರುವುದು ಬೆಳಕಿಗೆ ಬಂದಿದೆ. ಆದರೆ ಅಷ್ಟೋತ್ತಿಗಾಗಲೇ ಗಂಗಪ್ಪ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿದೆ.
Click 👇