ನ್ಯೂಸ್ ನಾಟೌಟ್: ಇತ್ತೀಚೆಗೆ ಮೊಂಟೆಸ್ಸರಿ ಶಿಕ್ಷಕರ ತರಬೇತಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಕಡಬದ ಸೇಂಟ್ ಜೋಕಿಮ್ಸ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಸಂಸ್ಥೆ ಮೊದಲ ವರ್ಷವೇ ಶೇ. 100 ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾದ 9 ವಿದ್ಯಾರ್ಥಿನಿಯರಲ್ಲಿ 5 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಮತ್ತು 4 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಫ್ರೀನಾ.ಎನ್ (94.75%), ವಾಣಿಶ್ರೀ(94.00%), ಸಂಧ್ಯಾ(93.06%), ಫಾತಿಮತ್ ಆಶ್ರೀಯಾ(91.94%), ಅನುಷಾ(90.44%) ವಿಶಿಷ್ಟ ಶ್ರೇಣಿ ಮತ್ತು ಮಾನ್ಯ ಶ್ರೀ(89.38%), ನಂದಿನಿ ಜಿ.ಎ(88.25%), ಫಾತಿಮತ್ ಜಂಶೀರಾ(87.81%), ಕೃಷ್ಣವೇಣಿ (86.50%) ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾರೆ. ಪ್ರತಿಯೊಬ್ಬರಿಗೂ ಉದ್ಯೋಗಾವಕಾಶ ನೀಡುವ ಭರವಸೆಯೊಂದಿಗೆ ಸಂಸ್ಥೆ ಕಡಬದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಅಧೀನದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ಯಾರಿಯರ್ ಟ್ರೈನಿಂಗ್ ನ ಆಶ್ರಯದಲ್ಲಿ ಈ ನರ್ಸರಿ ಟೀಚರ್ ಟ್ರೈನಿಂಗ್ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. 2024-25ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭಗೊಂಡಿದೆ. ಆಸಕ್ತರು ದೂರವಾಣಿ ಸಂಖ್ಯೆ 9448409912, 9743271502, 9148121463 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.