ನ್ಯೂಸ್ ನಾಟೌಟ್: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿ ಕಿತ್ತು ತಿಂದ ಕರುಣಾಜನಕ ಘಟನೆ ರಾಯಚೂರಿನ ಕೊರವಿಹಾಳ ಗ್ರಾಮದಲ್ಲಿ ನಡೆದಿದೆ.
ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ನಾಲ್ಕು ವರ್ಷದ ಬಾಲಕಿ ಲಾವಣ್ಯ(4) ಮೃತಪಟ್ಟಿದ್ದಾಳೆ ಕೊರವಿಹಾಳ ಗ್ರಾಮದ ಕೀರಲಿಂಗ ಎಂಬುವವರ ಮಗಳು ಲಾವಣ್ಯ ಕಳೆದ ಶನಿವಾರ(ಮೇ.18) ಮೃತಪಟ್ಟಿದ್ದು, ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಲಾವಣ್ಯ ಸೇರಿ ನಾಲ್ಕೈದು ಮಕ್ಕಳು ಮನೆ ಮುಂದೆ ಆಟವಾಡುತ್ತಿದ್ದರು. ಈ ವೇಳೆ ಬೀದಿ ನಾಯಿಯೊಂದು ಮಕ್ಕಳ ಮೇಲೆ ಏಕಾಏಕಿ ದಾಳಿ ನಡೆಸಿದೆ. ದಾಳಿ ಸಮಯದಲ್ಲಿ ಲಾವಣ್ಯಳ ಕತ್ತಿನ ಹಿಂಭಾಗಕ್ಕೆ ದಾಳಿ ಮಾಡಿದ ನಾಯಿ ಕ್ರೂರವಾಗಿ ಕಚ್ಚಿ ಮಾಂಸ ಕಿತ್ತು ತಿಂದಿದೆ ಎನ್ನಲಾಗಿದೆ.
ಕಳೆದ 15 ದಿನಗಳ ಹಿಂದೆ ನಡೆದ ಈ ದಾಳಿಯಲ್ಲಿ ಅದೇ ಗ್ರಾಮದಲ್ಲಿ ಏಳು ಮಕ್ಕಳಿಗೆ ನಾಯಿ ಕಚ್ಚಿತ್ತು. ಇತ್ತ ನಾಯಿ ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಲಾವಣ್ಯಳನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾವಣ್ಯ ಶನಿವಾರ(ಮೇ.18) ಮೃತಪಟ್ಟಿದ್ದಾಳೆ ಎನ್ನಲಾಗಿದೆ. ರೊಚ್ಚಿಗೆದ್ದ ಗ್ರಾಮಸ್ಥರು ದಾಳಿ ಮಾಡಿದ್ದ ಬೀದಿ ನಾಯಿಯನ್ನು ಹಿಡಿದು ಕೊಂದಿದ್ದಾರೆ ಎಂದು ವರದಿ ತಿಳಿಸಿದೆ.
Click 👇