ಕ್ರೀಡೆ/ಸಿನಿಮಾದಕ್ಷಿಣ ಕನ್ನಡನಮ್ಮ ತುಳುವೇರ್ರಾಜ್ಯಸಿನಿಮಾ

Darshan Thoogudeepa: ಡಿ ಬಾಸ್ ಜೊತೆ ನಟಿಸಲಿದ್ದಾರೆ ತುಳುನಾಡ ಬೆಡಗಿ..! ಈಕೆ ಡ್ಯಾನ್ಸರ್ ಮತ್ತು ಬರಹಗಾರ್ತಿ

143

ನ್ಯೂಸ್ ನಾಟೌಟ್: ಜಾಲೆಂಜಿಂಗ್ ಸ್ಟಾರ್ ದರ್ಶನ್‌ ನಾಯಕರಾಗಿರುವ “ಡೆವಿಲ್‌’ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದ್ದು, ಕರಾವಳಿ ನಟಿ ರಚನಾ ರೈ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಕರಾವಳಿ ಮೂಲದ ರಚನಾ ರೈ ಈಗಾಗಲೇ ತುಳುವಿನ “ಸರ್ಕಸ್‌’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೇ “ವಾಮನ’ ಚಿತ್ರದಲ್ಲೂ ರಚನಾ ನಾಯಕಿಯಾಗಿದ್ದರು.

ಡಿಬಾಸ್ ಜೊತೆ ಚಿತ್ರದಲ್ಲಿ ನಟಿಸುವ ಅವಕಾಶ ರಚನಾ ರೈಗೆ ಸಿಕ್ಕಿದೆ. ಈಗಾಗಲೇ “ಡೆವಿಲ್‌’ ಚಿತ್ರ ಒಂದು ಹಂತದ ಚಿತ್ರೀಕರಣ ಪೂರೈಸಿದೆ. ಮಿಲನಾ ಪ್ರಕಾಶ್‌ ಈ ಚಿತ್ರದ ನಿರ್ದೇಶಕರು. ಈ ಹಿಂದೆ ದರ್ಶನ್‌ ಜೊತೆ ತಾರಕ್‌ ಮಾಡಿದ ಪ್ರಕಾಶ್‌ ಈ ಬಾರಿ ಡೆವಿಲ್‌ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡಿತ್ತು ತಂಡ. ಚಿತ್ರದ ಟೀಸರ್‌ನಲ್ಲಿ ದರ್ಶನ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತುಳುನಾಡಿನ ನಟಿ ಕೇವಲ ನಟಿ ಮಾತ್ರವಲ್ಲ ಬ್ಯಾಡ್ಮಿಂಟನ್ ಪ್ಲೇಯರ್‌, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ ಆಗಿದ್ದಾರೆ. ಡೆವಿಲ್ ದಿ ಹೀರೋ ಚಿತ್ರಕ್ಕೆ ರಚನಾ ರೈ ಹೀರೋಯಿನ್ ಅನ್ನುವ ಮಾತನ್ನ, ಅಧಿಕೃತವಾಗಿಯೇ ಡೈರೆಕ್ಟರ್ ಮಿಲನ ಪ್ರಕಾಶ್ (Milan Prakash) ಹೇಳಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ ಮೂಲಕ ಈ ವಿಷಯವನ್ನ ತಿಳಿಸಿದ್ದು, ನಮ್ಮ ನೆಲೆದ ಪ್ರತಿಭೆ ಎನ್ನುವುದನ್ನೂ ಮಿಲನಾ ಪ್ರಕಾಶ್ ಹೇಳಿಕೊಂಡಿದ್ದಾರೆ.

Click 👇

https://newsnotout.com/2024/05/election-and-re-voting-misleading
https://newsnotout.com/2024/05/narendra-modi-and-teacher-rajak
https://newsnotout.com/2024/05/30-year-old-jyoti-amge-viral-video
See also  ಮರ್ಕಂಜ: ಬಸ್ ಅಡ್ಡಗಟ್ಟಿ ಕಾಡಾನೆಗಳ ಪುಂಡಾಟ..!, ರಾತ್ರಿ ಬಸ್ ನಿಲ್ಲಿಸಿ ಬುದ್ಧಿವಂತಿಕೆಯಿಂದ ಲೈಟ್ ಆಫ್ ಮಾಡಿದ ಚಾಲಕ
  Ad Widget   Ad Widget   Ad Widget   Ad Widget   Ad Widget   Ad Widget