ನ್ಯೂಸ್ ನಾಟೌಟ್: ಕಟ್ಟಡದ ರೂಫ್ ನಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡುತ್ತಿದ್ದ ಬೆಕ್ಕಿನ ರಕ್ಷಣಾ ಕಾರ್ಯಾಚರಣೆಗೆ ಹಲವು ತಯಾರಿಯೊಂದಿಗೆ ಬಂದಿದ್ದ ರಕ್ಷಣಾ ಸಿಬ್ಬಂದಿಗೆ ಶಾಕ್ ಎದುರಾಗಿತ್ತು. ಈ ಘಟನೆ ಮಲೇಷಿಯಾದಲ್ಲಿ ನಡೆದಿದ್ದು ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದ ಬೆಕ್ಕನ್ನು ಕಂಡು ಸಾರ್ವಜನಿಕರು ರಕ್ಷಣಾ ಕಾರ್ಯಾಚರಣೆ ನಡೆಸಲು ಭದ್ರತಾ ಸಿಬಂದಿಗಳಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ತಂಡ ಸುರಕ್ಷತಾ ನೆಟ್ ಬಳಸಿ ಬೆಕ್ಕನ್ನು ರಕ್ಷಿಸಲು ಮುಂದಾಗಿದ್ದಾರೆ. ಭಾರೀ ಪ್ರಯತ್ನ ನಡೆಸಿ ಭದ್ರತಾ ಪಡೆಗಳು ಬೆಕ್ಕನ್ನು ನೆಟ್ ನೊಳಗೆ ಬೀಳಿಸಲು ಮುಂದಾದರೂ, ಕೊನೆಗೆ ಭದ್ರತಾ ಸಿಬಂದಿಯೊಬ್ಬರು ಏಣಿಯೇರಿ ಕೋಲಿನ ಸಹಾಯದಿಂದ ಬೆಕ್ಕನ್ನು ಕೆಳಕ್ಕೆ ದೂಡಿದ್ದಾರೆ. ನೆಟ್ ಗೆ ಬೀಳುವ ಬದಲು ಬೆಕ್ಕು ನೇರವಾಗಿ ಸುರಕ್ಷಿತವಾಗಿ ನೆಲಕ್ಕೆ ಹಾರಿ ಓಡಿದೆ.
ಇದನ್ನು ಕಂಡು ಹಲವರು ನಕ್ಕಿದ್ದು, ಕಾರ್ಯಾಚರಣೆಗೆ ಬಂದವರು ಅಚ್ಚರಿಗೊಂಡಿದ್ದಾರೆ. ಮೊದಲ ಮಹಡಿಯಲ್ಲಿದ್ದ ಬೆಕ್ಕನ್ನು ರಕ್ಷಿಸಲು ಇಷ್ಟೆಲ್ಲಾ ಕಸರತ್ತು ಬೇಕಿತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ, ಮಾನವೀಯತೆಯ ದೃಷ್ಟಿಯಿಂದ ದಯೆ ತೋರಿದ ಅಧಿಕಾರಿಗಳಿಗೆ ಮೆಚ್ಚುಗೆಯು ವ್ಯಕ್ತವಾಗಿದೆ.