ನ್ಯೂಸ್ ನಾಟೌಟ್: ನಿಮಗೊತ್ತೇ..? ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರಕ್ಕೆ ಆರು ಭಾಷೆಗಳಲ್ಲಿ ಆರು ಹೆಸರಿನಿಂದ ಕರೆಯುತ್ತಾರೆ. ಬಹುಶಃ ಒಂದು ನಗರವನ್ನು ಇಷ್ಟೊಂದು ಹೆಸರಿನಿಂದ ಕರೆಯುವುದು ಇಲ್ಲಿ ಮಾತ್ರ ಅನಿಸುತ್ತೆ. ಹಾಗಾದರೆ ಮಂಗಳೂರಿಗೆ ಇರುವ ಆ ಆರು ಹೆಸರುಗಳು ಯಾವುವು..? ಅನ್ನುವುದನ್ನು ಒಮ್ಮೆ ನೋಡೋಣ.
ಮಂಗಳೂರು ಅನ್ನು ತುಳುವಿನಲ್ಲಿ ಕುಡ್ಲ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ತುಳುವರು ಇದನ್ನು ಅತ್ಯಂತ ಪ್ರೀತಿಯಿಂದ ಹೆಮ್ಮೆಯಿಂದ ಕರೆಯುತ್ತಾರೆ. ಅದೇ ಬ್ಯಾರಿ ಭಾಷೆಯಲ್ಲಿ ಮೈಕಲ್ ಎನ್ನುತ್ತಾರೆ. ಜಾತಿ ಧರ್ಮ ಮೀರಿ ಮಂಗಳೂರು ಅನ್ನುವುದನ್ನು ಜನರು ಹೇಗೆಲ್ಲ ಕರೆಯುತ್ತಾರೆ ಅನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಅಲ್ಲದೆ ಕೊಂಕಣಿಯಲ್ಲಿ ಕೊಡಿಯಾಲ್, ಮಲೆಯಾಳಂನಲ್ಲಿ ಮಂಗಳಾಪುರಂ, ಇಂಗ್ಲಿಷ್ ನಲ್ಲಿ Mangalore ಮತ್ತು ಕನ್ನಡದಲ್ಲಿ Mangaluru ಎಂದೂ ಕರೆಯುತ್ತಾರೆ.
ತುಳು ಮಾತನಾಡುತ್ತಾರೆ ಅಂದ ಕ್ಷಣ ಇಲ್ಲಿನ ಜನರಿಗೆ ಕನ್ನಡದ ಮೇಲೆ ಪ್ರೀತಿ ಇಲ್ಲ ಅನ್ನುವುದು ಸುಳ್ಳು. ಕರ್ನಾಟಕದ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರು ಅಚ್ಚ ಕನ್ನಡದಿಂದ ಸ್ಪಷ್ಟ ಕನ್ನಡದಿಂದ ಮಾತನಾಡುತ್ತಾರೆ. ಇದನ್ನು ಕೆಲವರು ‘ಎಂಥಾ ಮಾರಾಯರೇ..ಗೊತ್ತುಂಟಾ..?’ ಎಂದು ವ್ಯಂಗ್ಯ ಮಾಡುವವರೂ ಇದ್ದಾರೆ. ಹಾಗಂತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಎಂದೂ ಕುಗ್ಗಿಲ್ಲ. ಕನ್ನಡ ಭಾಷೆ ವಿಷಯ ಬಂದಾಗ ಒಕ್ಕೊರಲಿನಿಂದ ಹೋರಾಟ ನಡೆಸಿದ ಇತಿಹಾಸವಿದೆ.
ಮಂಗಳೂರು ಜನರು ಭಾಷಾ ವೈವಿಧ್ಯತೆ ಹೊಂದಿದ್ದಾರೆ. ತಮ್ಮ ಭಾಷೆಯನ್ನು ಮಣ್ಣಿನ ನೆಲವನ್ನು ಗೌರವಿಸುತ್ತಾ ಇತರೆ ಭಾಷಗಳ ಮೇಲೂ ಒಲವು ಹೊಂದಿದ್ದಾರೆ.