ಸಂಪಾಜೆ: ಇಲ್ಲಿನ ಚಟ್ಟೆಕಲ್ಲಿನ ಅರ್ಚಕ, ಜ್ಯೋತಿಷಿ ಅಂಬರೀಶ್ ಭಟ್ ಅವರ ಮನೆ ಅಂಬಾಶ್ರಮಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಹಣ ದರೋಡೆ ಮಾಡಿದ ಕಳ್ಳರ ಸುಳಿವನ್ನು ಹಿಡಿದು ಪೊಲೀಸರು ಚುರುಕಿನ ತನಿಖೆ ಆರಂಭಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಗೌಪ್ಯ ತನಿಖೆ ನಡೆಸುತ್ತಿದ್ದಾರೆ. ಯಾವುದೇ ಮಾಹಿತಿ ಹೊರಗಡೆ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿರುವ ತನಿಖಾಧಿಕಾರಿಗಳು ಹಲವಾರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ದರೋಡೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ವಯಸ್ಸಾದ ಇಬ್ಬರು ವೃದ್ದರಷ್ಟೇ ಮನೆಯಲ್ಲಿ ಇದ್ದರು. ಮನೆ ಮಾಲೀಕರಾಗಿರುವ ಅಂಬರೀಶ್ ಭಟ್ ಹಾಗೂ ಶ್ರೀವತ್ಸ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಇದೇ ಸಮಯವನ್ನು ಹೊಂಚು ಹಾಕಿ ಕುಳಿತಿದ್ದ ದರೋಡೆಕೋರರು ದಾಳಿ ನಡೆಸಿ ಅಸಹಾಯಕ ಮಹಿಳೆಯರನ್ನು ಎಳನೀರು ಕೊಚ್ಚುವ ಮಚ್ಚು ಹಿಡಿದು ಹೆದರಿಸಿ ೧೦೦ ಗ್ರಾಂ ಚಿನ್ನಾಭರಣ, ೧,೫೦ ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಹಾಗಾದರೆ ಇದು ಪ್ರೀ ಪ್ಲಾನ್ ಆಗಿರಬಹುದೇ ಅನ್ನುವ ಅನುಮಾನಗಳು ವ್ಯಕ್ತವಾಗುತ್ತಿದೆ. ಹಲವು ದಿನಗಳಿಂದ ಅಂಬರೀಶ್ ಭಟ್ ಹಾಗೂ ಅವರ ಮನೆಯವನ್ನು ನಿಗಾದಲ್ಲಿರಿಸಿಕೊಂಡೇ ಕೃತ್ಯ ನಡೆಸಿರಬಹುದು. ಇದರಲ್ಲಿ ಸ್ಥಳೀಯ ವ್ಯಕ್ತಿಗಳ ಪಾತ್ರವಿದೆಯೇ ಅನ್ನುವುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪೊಲೀಸರು ಈ ಬಗ್ಗೆ ಮಾಧ್ಯಮಗಳಿಗೆ ಏನನ್ನೂ ಉತ್ತರಿಸುತ್ತಿಲ್ಲ. ತನಿಖಾ ದೃಷ್ಟಿಯಿಂದ ಒಂದಷ್ಟು ಗೌಪ್ಯತೆ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ ಎಂದು ನ್ಯೂಸ್ ನಾಟೌಟ್ ಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ದರೋಡೆ ಮಾಡಲು ಬಂದ ತಂಡ ತಮಿಳು ಭಾಷೆ ಹಾಗೂ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು. ಹೀಗಾಗಿ ಅಂತಾರಾಜ್ಯ ಕಳ್ಳರ ಕೈವಾಡ ಇರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಅಂಬರೀಶ್ ಭಟ್ ಅವರು ಜ್ಯೋತಿಷ್ಯ ಶಾಸ್ತ್ರ ಹೇಳುವ ವೃತ್ತಿ ಮಾಡುವುದರಿಂದ ಅವರ ಮನೆಗೆ ದಿನನಿತ್ಯ ಹತ್ತಾರು ಜನರು ಭವಿಷ್ಯ ಕೇಳಲು ಬರುತ್ತಿರುತ್ತಾರೆ. ಹಾಗೆ ಬಂದವರಿಂದಲೇ ಈ ಕೃತ್ಯ ನಡೆದಿರಬಹುದೇ ಅನ್ನುವ ಆಯಾಮದಿಂದಲೂ ತನಿಖೆ ನಡೆಯುತ್ತಿದೆ.
ಸದ್ಯ ಪುತ್ತೂರು ಉಪ ವಿಭಾಗದ ಡಿವೈಎಸ್ ಪಿ ಡಾ ಘಾನ ಪಿ ಕುಮಾರ್, ಹೆಚ್ಚುವರಿ ಎಸ್ ಪಿ ಕುಮಾರ್ ಚಂದ್ರ, ಸುಳ್ಯದ ವೃತ್ತ ನಿರೀಕ್ಷಕ ಚಂದ್ರಶೇಖರ ಜೋಗಿ ನೇತೃತ್ವದಲ್ಲಿ ತಂಡ ಸ್ಥಳಕ್ಕೆ ಭೇಟಿಕೊಟ್ಟು ತನಿಖೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಲ್ಲಿ ನಡೆದಿರುವ ಅತೀ ದೊಡ್ಡ ದರೋಡೆ ಪ್ರಕರಣಗಳಲ್ಲಿ ಇದು ಕೂಡ ಒಂದಾಗಿದೆ. ಕೆಲವು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಸಮೀಪದಲ್ಲೂ ಇಂತಹುದೇ ಒಂದು ದರೋಡೆ ಪ್ರಕರಣ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೇಜಿನ ಮೇಲಿದ್ದ ಪಿರ್ಯಾದಿದಾರರ ಗಂಡನ ಪರ್ಸ್ ನಿಂದ 2 ½ ಸಾವಿರ ಹಣ ಮಾವನ ಸಾಮ್ ಸಾಂಗ್ ಮೊಬೈಲ್ ತೆಗೆದಿದ್ದು ದೇವರ ಕೋಣೆಯಲ್ಲಿರುವ ಕಪಾಟಿನಿಂದ 5 ವರಲ್ಲಿ 2 ಹುಂಡಿ ಮತ್ತು 2 ಬ್ಯಾಗಿನಲ್ಲಿದ್ದ 150,000/, ಕಳ್ಳರ ಪೈಕಿ ಒರ್ವ ವ್ಯಕ್ತಿ 45 ರಿಂದ 50 ವಯಸ್ಸಿನವನಾಗಿದ್ದು, ಉಳಿದ 5 ಜನ 20 ರಿಂದ 30 ವರ್ಷ ಪ್ರಾಯದವರಾಗಿದ್ದು, ಇಬ್ಬರು ಕಪ್ಪು ಪ್ಯಾಂಟ್ ಒಬ್ಬ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದು ಹೋಗುವಾಗ ಯಾರಿಗೂ ಹೇಳಿದಂತೆ ಬೆದರಿಕೆ ಹಾಕಿ ಹೋಗಿದ್ದು, ಈ ಘಟನೆಯು ರಾತ್ರಿ 8.30 ಗಂಟೆಯಿಂದ 9.00 ಗಂಟೆ ಮಧ್ಯೆ ನಡೆದಿದ್ದು, ಅವರುಗಳು ಹೋದ ನಂತರ ಪಿರ್ಯಾದಿದಾರರು ಪರಿಶೀಲಿಸಿದಾಗ ಲ್ಯಾಂಡ್ ಲೈನ್ ಫೋನ್ ಒಡೆದು ಹಾಕಿದ್ದು ಗೋದ್ರೇಜಿನಲ್ಲಿದ್ದ ಅತ್ತೆಯ ಬಾಬ್ತು 30 ಗ್ರಾಂ ತೂಕದ ತಾಳಿ ಚೈನ್ ಅಂದಾಜು ಮೌಲ್ಯ ರೂ 1,50,000/- 2) 37 ಗ್ರಾಂ ತೂಕದ ಚಿನ್ನದ ರೋಪ್ ಚೈನ್ ಅಂದಾಜು ಮೌಲ್ಯ ರೂ 1,60,000/-3) 4 ಗ್ರಾಂ ತೂಕದ ಚಿನ್ನದ ಉಂಗುರ ಅಂದಾಜು ಮೌಲ್ಯ ರೂ 20000/- 4) 12 ಗ್ರಾಂ ತೂಕದ 2 ಜತೆ ಕಿವಿಯ ಓಲೆ ಅಂದಾಜು ಮೌಲ್ಯ ರೂ 60000/- 5) ನಗದು ರೂ 1,50,000/- 6) ಸ್ಯಾಮ್ ಸಾಂಗ್ ಮೊಬೈಲ್-1 ಅಂದಾಜು ಮೌಲ್ಯ ರೂ 7,500/- 7) ಪರ್ಸ್ ನಲ್ಲಿದ್ದ ನಗದು ರೂ 2,500/- ನೇದನ್ನು ತೆಗೆದುಕೊಂಡು ಹೋಗಿದ್ದು, ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ 5,50,000/- ಆಗಿದೆ.