ನ್ಯೂಸ್ ನಾಟೌಟ್: ಪಾಕಿಸ್ತಾನದ ಮೌಲ್ವಿಯೊಬ್ಬ ಭಾರತದ ವಿವಾದಿತ ಭಾಷಣಕಾರ ಜಾಕೀರ್ ನಾಯ್ಕ್ (Zakir Naik)ನನ್ನು ದೇಶದ ಚಕ್ರವರ್ತಿಯನ್ನಾಗಿ ಘೋಷಿಸಬೇಕೆಂದು ಹೇಳಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ ಮತ್ತು ವಿವಾದ ಸೃಷ್ಟಿಸಿದೆ. ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ‘ಸಾಂಪ್ರದಾಯಿಕ ಹಿಂದೂ ಧರ್ಮ’ವನ್ನು ಉತ್ತೇಜಿಸುವ ಪಕ್ಷವು ಭಾರತವನ್ನು ಆಳುತ್ತಿರುವ ಅವಧಿಯಲ್ಲಿ ಸಾವಿರಾರು ಹಿಂದೂಗಳನ್ನು ಮತಾಂತರಗೊಳಿಸಲು ಯತ್ನಿಸುವ ಜಾಕೀರ್ ನಾಯ್ಕ್ನ ಪಾತ್ರವನ್ನು ಮೌಲ್ವಿ ಶ್ಲಾಘಿಸಿದ್ದು, ಮೌಲ್ವಿ ತನ್ನ ಭಾಷಣದಲ್ಲಿ, ʼʼಡಾ.ಜಾಕೀರ್ ನಾಯ್ಕ್ ಇಂದು ತಮ್ಮ ಭಾಷಣ, ವಿಡಿಯೊದ ಮೂಲಕ ಸಾವಿರಾರು ಹಿಂದುಗಳ ಮತಾಂತರ ನಡೆಸಿದ್ದಾರೆ.
ಸದ್ಯ ಭಾರತದಲ್ಲಿ ಆಡಳಿತ ನಡೆಸುತ್ತಿರುವ, ಮೋದಿ ನೇತೃತ್ವದ ಹಿಂದು ಪರವಾದ ಸರ್ಕಾರದ ಅವಧಿಯಲ್ಲಿ ಡಾ.ಝಾಕೀರ್ಗೆ ಪ್ರವಾದಿ ಇಬ್ರಾಹಿಂ ಅವರಂತೆ ಕಷ್ಟಕರ ಜೀವನ ನಡೆಸುವುದು ಅನಿವಾರ್ಯ ಎನಿಸಿಕೊಂಡಿದೆʼʼ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ʼʼಡಾ.ಜಾಕೀರ್ ನಾಯ್ಕ್ ತನ್ನ ವಿಡಿಯೊದ ಮೂಲಕ ಅನೇಕ ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಹೀಗಾಗಿ ಅವರು ಅಲ್ಲಾಹುವಿನ ಸ್ನೇಹಿತ ಎನಿಸಿಕೊಂಡಿದ್ದಾರೆ. ಜತೆಗೆ ಭಾರತದ ಚಕ್ರವರ್ತಿ ಯಾಕಾಗಬಾರದು?ʼʼ ಎಂದು ಪ್ರಶ್ನಿಸಿಸುವ ಮೂಲಕ ನಾಲಿಗೆ ಹರಿಯಬಿಟ್ಟಿದ್ದಾನೆ. ಸದ್ಯ ಪಾಕಿಸ್ತಾನದ ಈ ಮೌಲ್ವಿಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Click 👇