ನ್ಯೂಸ್ ನಾಟೌಟ್: ಸುಳ್ಯ ಮತ್ತು ಪುತ್ತೂರು ಭಾಗದಲ್ಲಿ ಗುಣಮಟ್ಟದ ಶೈಕ್ಷಣಿಕ ಸೇವೆಯ ಮೂಲಕ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಸ್ಪೂರ್ತಿಯಾಗಿರುವ IRCMD ಸಂಸ್ಥೆ ಸಾಧನೆಗೆ ಮತ್ತೊಂದು ಕಿರೀಟ ಸೇರಿಕೊಂಡಿದೆ. ಈ ಸಲ CAMPCO – 2024 ನೇಮಕಾತಿ ಪರೀಕ್ಷೆಯಲ್ಲಿ ಇಲ್ಲಿನ ಮೂವರು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
21-04-2024 ರಂದು ನಡೆದ ಕ್ಯಾಂಪ್ಕೋ ಜೂನಿಯರ್ ಅಸಿಸ್ಟೆಂಟ್ (A/M) ಹುದ್ದೆಗಳಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ IRCMD ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಪೈಕಿ ರಕ್ಷಾ ಜೆ.ಡಿ, ವಿಶಾಲ್.ಎಸ್ ಮತ್ತು ಅನುಶ್ರೀ ಎ.ಎನ್ ರವರು ಉತ್ತೀರ್ಣಗೊಂಡಿರುತ್ತಾರೆ. ಪ್ರತಿಷ್ಠಿತ ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷಾ ತರಬೇತಿಯನ್ನು ಆನ್ ಲೈನ್ ಮೂಲಕ ಪಡೆದಿದ್ದಾರೆ.
ಉದ್ಯೋಗ ಮಾರ್ಗದರ್ಶನದೊಂದಿಗೆ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾದ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು 2010 ರಲ್ಲಿ ಸ್ಥಾಪನೆಗೊಂಡು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದೆ. ಬ್ಯಾಂಕಿಂಗ್ ಕ್ಷೇತ್ರ, ಸಹಕಾರ ಕ್ಷೇತ್ರ, ಕೇಂದ್ರ ಮತ್ತು ರಾಜ್ಯ ಸರಕಾರದ ಅಡಿಯಲ್ಲಿ ಬರುವ ಅನೇಕ ಹುದ್ದೆಗಳನ್ನು ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಲಂಕರಿಸಿದ್ದಾರೆ. ಅಲ್ಲದೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ PGCET (MBA/MCA) ಪ್ರವೇಶ ಪರೀಕ್ಷೆಯಲ್ಲೂ ಈ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಯಾಂಕ ಪಡೆದಿದ್ದಾರೆ.
ಪ್ರತಿ ದಿನದ ಮತ್ತು ವಾರಾಂತ್ಯದ ಬ್ಯಾಚುಗಳು ಲಭ್ಯವಿದ್ದು (ಆನ್ ಲೈನ್/ ನೇರ). ಆಸಕ್ತರು ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ದೂರವಾಣಿ ಸಂಖ್ಯೆ 9945988118 / 9632320477 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆ ನೀಡಿದೆ.