ನ್ಯೂಸ್ ನಾಟೌಟ್: ಈಗಾಗಲೇ ಮೊಬೈಲ್ ರಿಚಾರ್ಜ್(Mobile Phone Recharges) ಮೊತ್ತವನ್ನು ಏರಿಕೆಯಾಗಿದೆ, ಇದೀಗ ಗ್ರಾಹಕರಿಗೆ ಮತ್ತೆ ಶಾಕ್ ಕೊಡಲು ಟೆಲಿಕಾಂ ಮುಂದಾಗಿದೆ. ಲೋಕಸಭೆ ಚುನಾವಣೆ ಬಳಿಕ ನಾಲ್ಕನೇ ಹಂತದ ಸುಂಕ ಏರಿಕೆಗೆ ಟೆಲಿಕಾಂ ಇಲಾಖೆ ಮುಂದಾಗಿದೆ ಎಂದು ವರದಿ ತಿಳಿಸಿದೆ. ಹೀಗಾಗಿ ಮೊಬೈಲ್ ರಿಚಾರ್ಜ್ ಮೊತ್ತ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಪರೇಟರ್ಸ್ಗಳ ಮೇಲಿನ ಸುಂಕವನ್ನು ಶೇ.25ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. 5G ಲಾಭದಾಯಕ ಹೂಡಿಕೆ ಹೆಚ್ಚಾಗಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಸುಂಕ ಏರಿಕೆ ಅಗತ್ಯವಾಗಿದೆ. ಟೆಲಿಕಾಂ ಇಲಾಖೆಯ ಈ ಕ್ರಮದಿಂದ ಗ್ರಾಮೀಣ ಮತ್ತು ನಗರದ ಗ್ರಾಹಕರ ಮೇಲೆ ಪರಿಣಾಮ ಬೀರಬಹುದಾಗಿದೆ. ಟೆಲಿಕಾಂ ಸೇವೆಗಳ ವೆಚ್ಚದಲ್ಲಿ ನಗರ ಪ್ರದೇಶದ ಗ್ರಾಹಕರು 3.2% ರಿಂದ 3.6%ಕ್ಕೆ ಏರಿಕೆ ಕಂಡರೆ, ಗ್ರಾಮೀಣ ಪ್ರದೇಶದ ಗ್ರಾಹಕರು 5.2% ರಿಂದ 5.9%ಕ್ಕೆ ಏರಿಕೆ ಕಾಣಬಹುದು ಎಂದು ‘ಬ್ರೋಕರೇಜ್ ಆಕ್ಸಿಸ್ ಕ್ಯಾಪಿಟಲ್’ ಹೇಳಿದೆ. ನಗರಗಳಲ್ಲಿ ವಾಸಿಸುವ ಜನರು ತಮ್ಮ ಒಟ್ಟು ವೆಚ್ಚದ 3.2% ಅನ್ನು ಟೆಲಿಕಾಂಗಾಗಿ ಖರ್ಚು ಮಾಡುತ್ತಿದ್ದರು, ಇದು 3.6% ಕ್ಕೆ ಹೆಚ್ಚಾಗುತ್ತದೆ. ಗ್ರಾಮೀಣ ನಿವಾಸಿಗಳಿಗೆ ಟೆಲಿಕಾಂ ವೆಚ್ಚವು 5.2% ರಿಂದ 5.9% ಕ್ಕೆ ಹೆಚ್ಚಾಗುತ್ತದೆ. ಲೋಕಸಭಾ ಚುನಾವಣೆಯ ನಂತರ ಮೊಬೈಲ್ ಬಳಕೆದಾರರು ದೊಡ್ಡ ಹಿನ್ನಡೆಯನ್ನು ಎದುರಿಸಬಹುದು ಎಂದು ಬ್ರೋಕರೇಜ್ ಆಕ್ಸಿಸ್ ಕ್ಯಾಪಿಟಲ್ ಹೇಳಿದೆ.
Click 👇