ನ್ಯೂಸ್ ನಾಟೌಟ್: ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿ, ಕೊರೊನಾ ಕಾಲದಲ್ಲಿ ಪತಿಯನ್ನೂ ಕಳೆದುಕೊಂಡಿರುವ ಮುಸ್ಲಿಂ ಮಹಿಳೆಗೆ ಕೆಲವು ಮುಸ್ಲಿಂ ಹುಡುಗರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮಹಿಳೆಯ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೂ ದುಷ್ಕರ್ಮಿಗಳು ಕಿರುಕುಳ ನೀಡಿದ್ದು, ಹಲ್ಲೆ (Assault case) ನಡೆಸಿದ್ದಾರೆ.
ದೂರು ನೀಡಿದರೂ ಪೊಲೀಸರು ಕ್ಯಾರೇ ಎಂದಿಲ್ಲ ಎಂದು ಆರೋಪಿಸಿದ್ದಾರೆ. ಗದಗ ಬೆಟಗೇರಿಯ ಆಶ್ರಯ ಕಾಲೋನಿ ನಿವಾಸಿಯಾದ ಸೈನಜಾ ಬೇಗಂ ಎಂಬಾಕೆ ಕಿರುಕುಳಕ್ಕೆ ಒಳಗಾದ ಮಹಿಳೆ ಎನ್ನಲಾಗಿದೆ. ನಾಲ್ಕು ಜನ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಸೈನಜಾ ಬೇಗಂ, ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಕೊರೊನಾದಿಂದ ಪತಿ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ಲಿಯಾಕತ್, ಅಲ್ತಾಫ್, ಸೈಯದ್ ಸೇರಿದಂತೆ ಹಲವರು ಈಕೆಗೆ ಕಿರುಕುಳ ನೀಡುತ್ತಿದ್ದು, ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದಿದ್ದು, ಸೈನಾಜ್ನ ಮಗ ಸದ್ದಾಂನ ಮೇಲೆ ಲಿಯಾಕತ್ ಗ್ಯಾಂಗ್ ತೀವ್ರವಾಗಿ ಹಲ್ಲೆ ಮಾಡಿದೆ. “ನಮಗೆ ಸೂಕ್ತವಾದ ರಕ್ಷಣೆ ನೀಡಬೇಕುʼʼ ಎಂದು ಮಹಿಳೆ ಒತ್ತಾಯಿಸಿದ್ದಾರೆ. ತಾಯಿ, ಮಕ್ಕಳ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಘಟನೆ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.