ನ್ಯೂಸ್ ನಾಟೌಟ್: ವಿಶ್ವದ ಅತ್ಯಂತ ದುಬಾರಿಯಾದ ಕೆ.ಜಿ.ಗೆ 2.5 ಲಕ್ಷ ರೂ.ಗಳ ಬೆಲೆ ಹೊಂದಿರುವ ಮಾವಿನ ಹಣ್ಣು ‘ಮಿಯಾ ಜಾಕಿ’ ಧಾರವಾಡದ ಮಾವುಮೇಳದಲ್ಲಿ ಕಾಣಿಸಿಕೊಂಡಿದೆ. ಬರೀ ಒಂದು ಹಣ್ಣಿಗೆ ಕನಿಷ್ಠವೆಂದರೂ 25-30ಸಾವಿರ ರೂ. ಇರಬಹುದೆಂದು ಅಂದಾಜಿಸಲಾಗಿದೆ. ದಾರವಾಡದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಂಗಳವಾರದಿಂದ(ಮೇ.14) ಆರಂಭಗೊಂಡಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಈ ಮಾವು ಮತ್ತಷ್ಟು ಕಳೆ ತಂದಿದೆ.
ಈ ದುಬಾರಿ ಮಾವು ಕಲಕೇರಿ ಮಾವು ಬೆಳೆಗಾರ ಪ್ರಮೋದ ಗಾಂವಕರ ತೋಟದ ಮಾವು ಎನ್ನಲಾಗಿದೆ. ಮೂರು ದಿನಗಳ ಆಯೋಜಿಸಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದು(ಮೇ 14,2024) ಚಾಲನೆ ದೊರೆತಿದೆ. ಕಳೆದ ನಾಲ್ಕು ವರ್ಷಗಳಿಂದ ರದ್ದಾಗುತ್ತಲೇ ಬಂದಿದ್ದ ಮಾವು ಮೇಳವು ಈ ಸಲ ಮಾವು ಬೆಳೆಗಾರರ ಒತ್ತಾಸೆಯಂತೆ ಆಯೋಜನೆಗೊಂಡಿದೆ. ಜಿಲ್ಲಾಡಳಿತ, ಜಿ.ಪಂ. ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಮಾವು ಮೇಳವು ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 9:00 ಗಂಟೆವರೆಗೆ ಇರಲಿದ್ದು, ಮಾವು ಪ್ರಿಯರು ಮೇಳಕ್ಕೆ ಭೇಟಿ ನೀಡಬಹುದಾಗಿದೆ. ಶುಗರ ಬೇಬಿ, ಗೋವಾ ಮನಕೂರ, ಸಿಂಧು, ರತ್ನಾ, ಸುವರ್ಣ ರೇಖಾ ಸೇರಿದಂತೆ ಮೇಳದಲ್ಲಿ 52 ವಿವಿಧ ಮಾವು ತಳಿಗಳ ಪ್ರದರ್ಶನ ಗಮನ ಸೆಳೆದಿದೆ.
Click