ನ್ಯೂಸ್ ನಾಟೌಟ್: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (CBSE) 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಇಂದು ಪ್ರಕಟಗೊಂಡಿರುವ ಫಲಿತಾಂಶದಲ್ಲಿ ಒಟ್ಟು ಶೇ. 87.98 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಒಟ್ಟು 16,33,730 ಮಂದಿ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 16,21,224 ಮಂದಿ ಪರೀಕ್ಷೆ ಬರೆದಿದ್ದಾರೆ. 14,26,420 ಮಂದಿ ಉತ್ತೀರ್ಣರಾಗಿದ್ದಾರೆ.
ಬೆಂಗಳೂರಿನಲ್ಲಿ (Bangalore CBSE 12th Results 2024) ಫಲಿತಾಂಶದ ಪ್ರಮಾಣ ಶೇ.96.95ರಷ್ಟಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿಗಳು ತಮ್ಮ CBSE ತರಗತಿ 12 ಫಲಿತಾಂಶ 2024 ಅನ್ನು cbse.gov.in ನಲ್ಲಿ ಅಧಿಕೃತ CBSE ವೆಬ್ಸೈಟ್ ಮೂಲಕ ಪರಿಶೀಲಿಸಬಹುದು. ಹೆಚ್ಚುವರಿಯಾಗಿ, cbse.nic.in, cbseresults.nic.in ಮತ್ತು results.cbse.nic.in ನಲ್ಲಿ ಫಲಿತಾಂಶಗಳನ್ನು ಪಡೆಯಬಹುದಾಗಿದೆ.
Click 👇