ನ್ಯೂಸ್ ನಾಟೌಟ್ : ನದಿಗೆ ಸ್ನಾನಕ್ಕೆ ತೆರಳಿದ್ದ ವ್ಯಕ್ತಿಯನ್ನು ಮೊಸಳೆ ತಿಂದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಬಳಿ ದೂಧಗಂಗಾ ನದಿಯಲ್ಲಿ ನಡೆದಿದೆ. ಮಹಾದೇವ ಪುನ್ನಪ್ಪ ಖುರೆ (72) ಎಂಬುವರು ಮೊಸಳೆ ಬಾಯಿಗೆ ಸಿಲುಕಿ, ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ಮಹಾದೇವ ಪುನ್ನಪ್ಪ ಖುರೆಯವರಿಗೆ ಈಜಲು ಬರುತ್ತಿರಲಿಲ್ಲ. ಹೀಗಾಗಿ ನದಿ (River) ದಡದಲ್ಲಿ ಕುಳಿತು ಸ್ನಾನ ಮಾಡುತ್ತಿದ್ದರು ಎನ್ನಲಾಗಿದೆ.
ಸ್ನಾನ ಮಾಡುತ್ತಿದ್ದ ಸಂಧರ್ಭದಲ್ಲಿ ಮಹಾದೇವ ಖುರೆಯನ್ನು ಮೊಸಳೆ ಎಳೆದುಕೊಂಡು ಹೋಗಿ ತೀವ್ರವಾಗಿ ಗಾಯಮಾಡಿದೆ. ಪರಿಣಾಮ ಮಹಾದೇವ ಖುರೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನದಿಯಲ್ಲಿ ಶವ ಕಂಡ ಬಳಿಕ ಸ್ಥಳೀಯರು ಶವವನ್ನ ಹೊರತೆಗೆದಿದ್ದು ಮರೋಣತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click 👇