ನ್ಯೂಸ್ ನಾಟೌಟ್: ಕರಾವಳಿಯ ಜನರ ನಂಬಿಕೆ, ಭಾವನಾತ್ಮಕ ವಿಚಾರಗಳು ಹಲವು. ಅಂತಹ ಮಹತ್ವದ ವಿಚಾರಗಳಲ್ಲಿ ‘ಪ್ರೇತ ಮದುವೆ’ ಕೂಡ ಒಂದು. ಇಂದು ವಧುವಿಗೆ ಸೂಕ್ತ ವರ ಸಿಗುವುದಿಲ್ಲ. ಸೂಕ್ತ ವರನಿಗೆ ವಧು ಕೂಡ ಸಿಗುವುದಿಲ್ಲ. ಮದುವೆ ಆಗುವವರ ಗೋಳು ಆ ದೇವರಿಗೇ ಪ್ರೀತಿ. ಹೀಗಿರುವಾಗ ಇಲ್ಲೊಂದು ಕಡೆ ಪ್ರೇತ ಮದುವೆಗೂ ಸೂಕ್ತ ವರ ಸಿಗದೆ ವಧುವಿನ ಕಡೆಯವರು ಪತ್ರಿಕೆಯಲ್ಲಿ ಜಾಹೀರಾತು ಹೊರಡಿಸಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಕರಾವಳಿಯಾದ್ಯಂತ ಚಾಲ್ತಿಯಲ್ಲಿರುವ ಪ್ರೇತ ಮದುವೆಗೆ ಪುತ್ತೂರಿನ ಮನೆಯೊಂದರಲ್ಲಿ ಸಿದ್ಧತೆ ನಡೆದಿತ್ತು. ಸುಮಾರು 30 ವರ್ಷದ ಹಿಂದೆ ತೀರಿ ಹೋದ ಯುವತಿಯೊಬ್ಬಳಿಗೆ ಮದುವೆ ಮಾಡಿಸಲು ತಯಾರಿ ಆಗಿತ್ತು. ಸಂಬಂಧಿಕರಲ್ಲಿ ವಿಚಾರಿಸಿದರೂ ಅದೇ ಜಾತಿಯ ಮೂವತ್ತು ವರ್ಷದ ಹಿಂದೆ ತೀರಿ ಹೋದ ಯುವಕನ ಪ್ರೇತ ಸಿಗಲಿಲ್ಲ. ಹೀಗಾಗಿ ಅದೇ ಜಾತಿಯ ಇತರ ಬದಿಯ 30 ವರ್ಷದ ಹಿಂದೆ ತೀರಿ ಹೋದ ಗಂಡು ಮಗುವಿನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಲಾಗಿತ್ತು. ಈ ಜಾಹೀರಾತು ಪ್ರಕಟವಾದ ಬೆನ್ನಲ್ಲೇ ಸುಮಾರು 50 ಕ್ಕೂ ಹೆಚ್ಚು ಪ್ರತಿಕ್ರಿಯೆಗಳೂ ಬಂದಿವೆ ಎಂದು ತಿಳಿದು ಬಂದಿವೆ.
ಪ್ರೇತ ಮದುವೆಯ ಜಾಹೀರಾತು ನೋಡಿದ ಕೆಲವರು ಅದನ್ನು ಅಪಹಾಸ್ಯ ಮಾಡಿದ್ದಾರೆ. ಇನ್ನೂ ಕೆಲವರು ನಮ್ಮ ತುಳುನಾಡ ಸಂಸ್ಕೃತಿ ಅಪಹಾಸ್ಯ ಮಾಡಿದ್ರೆ ಜೋಕೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗುತ್ತಿದ್ದಂತೆ ಒಂದಷ್ಟು ಪಾಸಿಟಿವ್ ಎಪ್ರೋಚ್ ಬಂದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
Click 👇