ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಲಬೆರಕೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿಯೊಂದರಲ್ಲೂ ಮೋಸ, ವಂಚನೆ, ಕಲಬೆರಕೆ ಆಗುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಇದೀಗ ವಿಷಪೂರಿತ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿದ್ದು ಗ್ರಾಹಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಪುರಸಭೆ ಮತ್ತು ಆಹಾರ ಸುರಕ್ಷತೆ ಗುಣಮಟ್ಟ ತಪಾಸಣೆ ಜಂಟಿ ಅಧಿಕಾರಿಗಳು ಸಂತೆ ವ್ಯಾಪಾರಿಗಳು ಮತ್ತು ರಸ್ತೆ ಬದಿ ಹಣ್ಣು ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಕೃತಕವಾಗಿ ಹಣ್ಣು ಮಾಡಿದ ರಾಸಾಯನಿಕ ಹಣ್ಣುಗಳ ರಾಶಿಯನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಾರಾಟಗಾರರಿಗೆ ಸೂಕ್ತ ಎಚ್ಚರಿಕೆಯನ್ನೂ ನೀಡಿದ್ದಾರೆ. ವ್ಯಾಪಾರಸ್ಥರು ತಾವು ಖರೀದಿ ಮಾಡುವ ಮೊದಲು ಕೃತಕವಾಗಿ ಹಣ್ಣಾಗುವ ರಾಸಾಯನಿಕವನ್ನು ಬಳಕೆ ಮಾಡಲಾಗಿದೆಯೇ ಎಂದು ಪರೀಕ್ಷೆ ಮಾಡಬೇಕು. ಬಳಿಕ ಅದನ್ನು ತಂದು ಗ್ರಾಹಕರಿಗೆ ತಂದು ನೀಡಬೇಕು ಎಂದು ಅಧಿಕಾರಿಗಳು ಮಾರಾಟಗಾರರಿಗೆ ಸೂಚನೆ ನೀಡಿದ್ದಾರೆ.
- +91 73497 60202
- [email protected]
- November 22, 2024 11:09 PM